ರಾಜ್ಯ

ಈಗ, ಜೋಗ್ ಫಾಲ್ಸ್ ಸಮೀಪ ಜಲ ಕ್ರೀಡೆ ಆಡಿ, ಎಂಜಾಯ್ ಮಾಡಿ!

Shilpa D
ಶಿವಮೊಗ್ಗ: ಜೋಗ್ ಫಾಲ್ಸ್ ಸಮೀಪದ ಶಿರೂರು ಕೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಲ್ಲಾ ರೀತಿಯ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗಿದೆ, ಶಿವಮೊಗ್ಗ ನಗರದಿಂದ ಸುಮಾರು 110 ಕಿಮೀ ದೂರವಿರುವ ಜೋಗ್ ಫಾಲ್ಸ್ ಪ್ರತಿ ವರ್ಷ ಸುಮಾರು 4 ಲಕ್ಷ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಬರುವ ಪ್ರವಾಸಿಗರಿಗೆ ಮತ್ತಷ್ಟು ಮೋಜಿಗಾಗಿ ಫಾಲ್ಸ್ ನಿಂದ 500 ಮೀಟರ್ ದೂರದಲ್ಲಿ ಜಲಕ್ರೀಡೆ ಕೇಂದ್ರ ಆರಂಭಿಸಲಾಗಿದೆ. ಶುಕ್ರವಾರದಿಂದ ಆರಂಭವಾಗಿದ್ದು, ಬೋಟಿಂಗ್ ಸೇರಿದಂತೆ ಆರು ರೀತಿಯ ಆಟಗಳನ್ನು ಆಡಿ ಆನಂದಿಸಬಹುದಾಗಿದೆ, ದಾಂಡೇಲಿ ಮೂಲದ ಕಂಪನಿ ಈ ಕ್ರೀಡಾ ಚಟುವಟಿಕೆಗಳ ಟೆಂಡರ್ ಪಡೆದುಕೊಂಡಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕೆ,ಸಿ ದಯಾನಂದ ಸ್ಥಳಕ್ಕೆ ಭೇಟಿ ನೀಡಿ  ಇಲ್ಲಿನ ಕ್ರೀಡೆಗಳನ್ನು ಆಡಿ ಮೊದಲ ಸಂಭ್ರಮಿಸಿದರು, ನೀರಿನಲ್ಲಿ ಆಟ ಆಡುವಾಗ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಮಲೆನಾಡು ಭಾಗದಲ್ಲಿ ಇದೇ ಮೊದಲ ಬಾರಿಗೆ ಎಲ್ಲಾ ರೀತಿಯ ಜಲ ಕ್ರೀಡೆಗಳನ್ನು ಒಂದೇ ಸ್ಥಳದಲ್ಲಿ ಆಡಬಹುದಾಗಿದೆ, ಜಲಾಶಯದಿಂದ ಶಿರೂರು ಕೆರೆಗೆ ನೀರು ಹರಿಯುವುದರಿಂದ ವರ್ಷಪೂರ್ತಿ ಕ್ರೀಡಾ ಚಟುವಟಿಕೆಗಳು ಇರುತ್ತವೆ, 
SCROLL FOR NEXT