ರಾಜ್ಯ

ಕಾಡಿನ ಆನೆ ದಾಳಿ: ಶಿಬಿರದ ಆನೆ ರಾಜೇಶ್ ಸಾವಿನ ಸುತ್ತ ಅನುಮಾನದ ಹುತ್ತ

Sumana Upadhyaya

ಬೆಂಗಳೂರು: ದಾಂಡೇಲಿ ಅರಣ್ಯದಲ್ಲಿ ಶಿಬಿರದ ಆನೆ ಸಾವಿಗೀಡಾಗಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಮುಖ ನಿರ್ಣಾಯಕ ಆವಾಸಸ್ಥಾನಗಳು ಮತ್ತು ಈ ಪ್ರದೇಶದಲ್ಲಿ ಮೀಸಲಾದ ವನ್ಯಜೀವಿ ಪಶುವೈದ್ಯ ಆರೈಕೆಯ ಕೊರತೆಯ ಬಗ್ಗೆ ಈ ಪ್ರಕರಣ ಎತ್ತಿ ತೋರಿಸುತ್ತದೆ. ವನ್ಯ ಆನೆಯ ದಾಳಿಯಿಂದ ಶಿಬಿರದ ಆನೆ ಸಾವಿಗೀಡಾಗುವುದು ರಾಜ್ಯದಲ್ಲಿ ಇದು ಎರಡನೇ ಪ್ರಕರಣ. ಇದು ಶಿಬಿರದಲ್ಲಿ ಮೃಗಗಳಿಗೆ ಇರುವ ಭದ್ರತೆಯನ್ನು ಪ್ರಶ್ನೆ ಮಾಡುತ್ತದೆ.

ಕಾಳಿ ಹುಲಿ ಅಭಯಾರಣ್ಯದಲ್ಲಿ ಫನ್ಸೊಲಿ ರೇಂಜ್ ಅರಣ್ಯದಲ್ಲಿ ಎರಡು ಅರಣ್ಯ ಆನೆಗಳಿಂದ 57 ವರ್ಷದ ಶಿಬಿರ ಆನೆ ರಾಜೇಶ್ ಮೃತಪಟ್ಟಿದೆ. ಅರಣ್ಯದ ಆನೆಗಳೊಂದಿಗೆ ನಡೆದ ದಾಳಿಯಲ್ಲಿ ತಲೆಗೆ ತೀವ್ರ ಏಟಾಗಿ ಕಳೆದ ಸೋಮವಾರ ರಾತ್ರಿ ಆನೆ ಮೃತಪಟ್ಟಿತ್ತು. ರಾಜೇಶ ಆನೆಯನ್ನು ಸರಪಳಿಯಿಂದ ಕಟ್ಟಿಹಾಕಿದ್ದರಿಂದ ಹೋರಾಡಲು ಸಾಧ್ಯವಾಗದೆ ಮೃತಪಟ್ಟಿತ್ತು.
ಎರಡು ತಿಂಗಳ ಹಿಂದೆ ನಾಗರಹೊಳೆಯಲ್ಲಿ ಅರಣ್ಯದ ಆನೆಯ ದಾಳಿಯಿಂದ ಶಿಬಿರದ ಆನೆ ದಾಳಿಗೀಡಾಗಿ ಮೃತಪಟ್ಟಿತ್ತು.

ಶಿಬಿರದ ಆನೆಯನ್ನು ಅರಣ್ಯದಲ್ಲಿ ಕಟ್ಟಿಹಾಕಬಾರದಿತ್ತು. ಹುಲಿ ಅಭಯಾರಣ್ಯದಲ್ಲಿ ನಿಗದಿತ ವನ್ಯಮೃಗಗಳಿಂದ ರಕ್ಷಣೆ ಪಡೆಯುವ ವ್ಯವಸ್ಥೆಗಳಿಲ್ಲ. ವೈದ್ಯರು ಬೇಕೆಂದರೆ ಶಿವಮೊಗ್ಗದಿಂದ ಬರಿಸಬೇಕಿತ್ತು. ರಾಜೇಶ್ ನನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎನ್ನುತ್ತಾರೆ ದಾಂಡೇಲಿಯ ವನ್ಯಜೀವಿ ಕಾರ್ಯಕರ್ತ.

SCROLL FOR NEXT