ವಿಜಯಪುರ: ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿಗಳು ದಾಳಿ ನಡೆಸಿ, ಲೆಕ್ಕಕೆ ಸಿಗದೆ 83,500 ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಿನಿ ವಿಧಾನಸೌಧದಲ್ಲಿರುವ ಉಪ ನೋಂದಣಾಧಿಕಾರಿ ಕಚೇರಿ ಮೇಲೆ ಎಸಿಬಿ ಎಸ್ಪಿ ಅಮರ್ ನಾಥ್ ರೆಡ್ಡಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆಯಲ್ಲಿ ಇಬ್ಬರು ಮಧ್ಯವರ್ತಿಗಳ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಕೆಸಿಎಸ್ ಆರ್ ಕಾಯ್ದೆ ಉಲ್ಲಂಘನೆ ಆರೋಪದಲ್ಲಿ ಉಪ ನೋಂದಣಾಧಿಕಾರಿ ಎನ್. ಸಿದ್ದರಾಮ್ ಹಾಗೂ ಕಚೇರಿ ಸಹಾಯಕ ಸಯ್ಯದ್ ಇನಾಂದಾರ್ ವಿರುದ್ದವೂ ಪ್ರಕರಣ ದಾಖಲಿಸಲಾಗಿದೆ.
ಈ ಕಾಯ್ಗೆ ಪ್ರಕಾರ ಎಷ್ಟು ಹಣ ಪಡೆಯಲಾಗಿದೆ ಎಂಬುದನ್ನು ನೋಂದಣಿ ಪುಸ್ತಕದಲ್ಲಿ ಬರೆದಿಡಬೇಕಾಗುತ್ತದೆ. ಆದರೆ, ಪುಸ್ತಕವನ್ನು ಪರಾಮರ್ಶೆ ನಡೆಸಿದ ಲೆಕ್ಕದಲ್ಲಿ ಹೊಂದಾಣಿಕೆಯಾಗುತ್ತಿರಲಿಲ್ಲ. ಅಧಿಕಾರಿಗಳು ಅಧಿಕ ಪ್ರಮಾಣದಲ್ಲಿ ಹಣ ಪಡೆದಿರುವುದು ಕಂಡುಬಂದಿತ್ತು.