ರಾಜ್ಯ

ಆಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಹೆಸರು ಬಳಕೆ: ಪೊಲೀಸ್ ಇಲಾಖೆ ಕ್ರಮಕ್ಕೆ ಇಡಿ ಆಕ್ಷೇಪ

Shilpa D
ಬೆಂಗಳೂರು: ಬಹುಕೋಟಿ ಆ್ಯಂಬಿಡೆಂಟ್‌ ವಂಚನೆ ಪ್ರಕರಣದಿಂದ ಬಚಾವ್‌ ಆಗಲು ಆರೋಪಿಯು ಜಾರಿ ನಿರ್ದೇಶನಾಲಯದ (ಇ.ಡಿ) ನೆರವು ಕೋರಿದ್ದಾನೆ ಎಂಬ ಹೇಳಿಕೆಗೆ ಜಾರಿ ನಿರ್ದೇಶನಾಲಯ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ. 
ತಮ್ಮೊಂದಿಗೆ ಚರ್ಚಿಸದೆ ನೇರವಾಗಿ ಪತ್ರಿಕಾಗೋಷ್ಠಿಯಲ್ಲಿ ಆರೋಪ ಮಾಡಿರುವುದಕ್ಕೆ ನಗರ ಪೊಲೀಸ್ ಆಯುಕ್ತ ವಿರುದ್ಧ ಇ.ಡಿ ಜಂಟಿ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಈ ಕುರಿತು ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಅವರಿಗೆ ಪತ್ರ ಬರೆದಿರುವ ಇ.ಡಿ ಸಾಕ್ಷ್ಯಾಧಾರಗಳು ಇಲ್ಲದ ಮಾಹಿತಿಯನ್ನು ಬಹಿರಂಗಪಡಿಸುವ ಮೊದಲು ರಾಜ್ಯ ಪೊಲೀಸ್‌ ಇಲಾಖೆಯು ನಿರ್ದೇಶನಾಲಯವನ್ನು ಸಂಪರ್ಕಿಸುವ ಅಥವಾ ಆರೋಪದ ಅಂಶಗಳ ಕುರಿತು ಪರಿಶೀಲಿಸುವ ಪ್ರಯತ್ನವನ್ನು ಮಾಡಿಲ್ಲ,'' ಎಂದು ಬೇಸರ ವ್ಯಕ್ತ ಪಡಿಸಿದೆ.
'ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯಡಿ ಬರುವ ಜಾರಿ ನಿರ್ದೇಶನಾಲಯವು ಆರ್ಥಿಕ ಅಪರಾಧಗಳ ಕುರಿತು ತನಿಖೆ ನಡೆಸುವ ಪ್ರತಿಷ್ಠಿತ ಏಜೆನ್ಸಿಯಾಗಿದೆ. ಪೊಲೀಸ್‌ ಆಯುಕ್ತರ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಏಜೆನ್ಸಿಯ ಘನತೆಗೆ ಧಕ್ಕೆ ಉಂಟು ಮಾಡಿದೆ,'' ಎಂದು ದೂರಿದೆ.
SCROLL FOR NEXT