ಸಂಗ್ರಹ ಚಿತ್ರ 
ರಾಜ್ಯ

ಬೆಳಗಾವಿ: ಶವ ಸಂಸ್ಕಾರದ ಸಿದ್ಧತೆಯಲ್ಲಿದ್ದ ಕುಟಂಬಸ್ಥರಿಗೆ ಅಚ್ಚರಿ, ಸತ್ತು ಬದುಕಿದ ವ್ಯಕ್ತಿ!

ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಮಕ್ಕಳು ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದು ಈ ಮಧ್ಯೆ ಸತ್ತ ವ್ಯಕ್ತಿ ಬದುಕಿದ್ದಾನೆ ಎಂದು ತಿಳಿದ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲ...

ಬೆಳಗಾವಿ: ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ ಮಕ್ಕಳು ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದು ಈ  ಮಧ್ಯೆ ಸತ್ತ ವ್ಯಕ್ತಿ ಬದುಕಿದ್ದಾನೆ ಎಂದು ತಿಳಿದ ಕುಟುಂಬಸ್ಥರ ಸಂತೋಷಕ್ಕೆ ಪಾರವೇ ಇಲ್ಲ. 
ಮಿದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ 46 ವರ್ಷ ಸಂಗಪ್ಪ ಖೇತಗೌಡ ಎಂಬುವರಿಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನವೆಂಬರ್ 18ರಂದು ಸಂಗಪ್ಪ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರಿಂದ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ತರಲಾಗುತ್ತಿತ್ತು. ನಿನ್ನೆ ತಡರಾತ್ರಿ ಮುಗಳಖೋಡ ಪಟ್ಟಣಕ್ಕೆ ಕರೆತರುವಾಗ ಸಂಗಪ್ಪ ಉಸಿರಾಡತೊಡಗಿದ್ದಾನೆ. 
ಸಂಗಪ್ಪ ಖೇತಗೌಡ ಮುಗಳಖೋಡ ಪುರಸಭೆ ಸದಸ್ಯ ಹಾಗೂ ಪಟ್ಟಣದ ಪಿಕೆಪಿಎಸ್ ನ ನಿರ್ದೇಶಕರೂ ಆಗಿದ್ದರು. ಹೀಗಾಗಿ ಸಂಗಪ್ಪ ಸಾವನ್ನಪ್ಪಿದ ಸುದ್ದಿ ತಿಳಿದ ಕೂಡಲೇ ಸ್ಥಳೀಯರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. 
ಸಂಗಪ್ಪ ಮೃತರಾಗಿದ್ದಾರೆ ಎಂದು ತಿಳಿದ ಕುಟುಂಬಸ್ಥರು ಶವ ಹೂಳಲು ಸಿದ್ಧತೆ ನಡೆಸಿದ್ದರು. ಮತ್ತೆ ಬದುಕಿದ್ದಾರೆಂದು ಗೊತ್ತಾದ ಬಳಿಕ ತೆಗೆದ ಸಮಾಧಿಯಲ್ಲಿ ಕೋಳಿಯನ್ನು ಹೂತು ಅಂತ್ಯ ಸರ್ಕಾರ ಮಾಡಿದ್ದಾರೆ. 
ಸದ್ಯ ಸಂಗಪ್ಪನಿಗೆ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿಯಿಂದ ಸಿಟಿ ರೌಂಡ್ಸ್

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರು ಜೊತೆ ತಾಯಿ ಸ್ಥದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ