ಅಜಯ್ ಮತ್ತು ಜ್ಯೋತಿ 
ರಾಜ್ಯ

ಕಲಬುರಗಿ: ವ್ಯಕ್ತಿ ನಾಪತ್ತೆ, ವಧು ದಕ್ಷಿಣಿ ಕಿರುಕುಳ ಎಂದು ದೂರು ನೀಡಿದ ಪೋಷಕರು

ವಧು ದಕ್ಷಿಣಿ ವಿಚಾರದಲ್ಲಿ ತಮ್ಮ ಮಗನನ್ನು ಸೊಸೆಯ ಸೋದರ ಅಪಹರಿಸಿದ್ದಾನೆ ಎಂದು ವ್ಯಕ್ತಿಯ ಪೋಷಕರು ...

ಕಲಬುರಗಿ: ವಧು ದಕ್ಷಿಣಿ ವಿಚಾರದಲ್ಲಿ ತಮ್ಮ ಮಗ ಮತ್ತು ಸೊಸೆಯನ್ನು ಆಕೆಯ ಪೋಷಕರ ಮನೆಯವರು ಅಪಹರಿಸಿದ್ದಾರೆ ಎಂದು ವ್ಯಕ್ತಿಯ ಪೋಷಕರು ದೂರು ನೀಡಿರುವ ಅಪರೂಪದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಅಜಯ್(40 ವ) ನ ತಾಯಿ ಮಂಗಳಾ ಮಾಡಿರುವ ಆರೋಪ ಪ್ರಕಾರ, ಸುಳೆಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತಮ್ಮ ಮಗ ಜ್ಯೋತಿ ಎಂಬಾಕೆಯನ್ನು ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದು ವಧು ದಕ್ಷಿಣೆಯಾಗಿ ಆಕೆಯ ಪೋಷಕರಿಗೆ 50 ಸಾವಿರ ರೂಪಾಯಿಯನ್ನು ನೀಡಿದ್ದೆವು. ಬುಡಕಟ್ಟು ಜನಾಂಗದ ಅಜಯ್ ನಲ್ಲಿ ವಧು ದಕ್ಷಿಣೆ ಕೊಡುವ ಸಂಪ್ರದಾಯವಿದೆ. ಮದುವೆಗೆ ಕೆಲ ದಿನಗಳ ಹಿಂದೆ ಜ್ಯೋತಿಯ ಕುಟುಂಬದವರು 2 ಲಕ್ಷ ರೂಪಾಯಿ ವಧು ದಕ್ಷಿಣೆ ನೀಡುವಂತೆ ಪೀಡಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕೆಲ ದಿನಗಳ ಹಿಂದೆ ಅಜಯ್ ಮತ್ತು ಜ್ಯೋತಿ ಇಬ್ಬರೂ ಕಾಣೆಯಾಗಿದ್ದರು. ಕಳೆದ ಬುಧವಾರ ಸುಳೇಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಅಜಯ್ ಪೋಷಕರು ದತ್ತಾ, ರವಿ ಮತ್ತು ಇತರ ಸಂಬಂಧಿಕರ ವಿರುದ್ಧ ಕೇಸು ದಾಖಲಿಸಲು ಯೋಚಿಸಿದ್ದರು. ಆದರೆ ಪೊಲೀಸರು ಇದುವರೆಗೆ ಕಾಣೆಯಾದ ಕೇಸು ಮಾತ್ರ ದಾಖಲಿಸಿಕೊಂಡಿದ್ದಾರೆ. ಅವರು ನಿಜಯವಾಗಿಯೂ ಅಪಹರಣವಾಗಿದ್ದರೆ ನಾವು ಕೇಸು ದಾಖಲಿಸುತ್ತೇವೆ ಎಂದು ಪೊಲೀಸರು ಹೇಳುತ್ತಾರೆ.

ಇದರಿಂದ ಸಮಾಧಾನವಾಗದ ಅಜಯ್ ಪೋಷಕರು ಪೊಲೀಸ್ ಸೂಪರಿಂಟೆಂಡೆಂಟ್ ಶಶಿ ಕುಮಾರ್ ಅವರನ್ನು ಸಂಪರ್ಕಿಸಿ ಸುಳೇಪೇಟೆ ಪೊಲೀಸರು ಅಪಹರಣ ಕೇಸನ್ನು ದಾಖಲಿಸಿ ತಮ್ಮ ಮಗನನ್ನು ಹುಡುಕಿಕೊಡುವಂತೆ ಪೊಲೀೂಸರಿಗೆ ಸೂಚನೆ ನೀಡಬೇಕು ಎಂದು ಕೇಳಿಕೊಂಡರು. ಪೊಲೀಸರು ಇದೀಗ ಅಜಯ್ ಮತ್ತು ಜ್ಯೋತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಜಯ್ ನ ಅತ್ತೆ-ಮಾವ ಹಾಗೂ ಇತರ ಸಂಬಂಧಿಕರನ್ನು ವಿಚಾರಣೆ ನಡೆಸಿದ್ದಾರೆ.

ಅಜಯ್ ಈ ಹಿಂದೆ ಯುವತಿಯೊಬ್ಬಳನ್ನು ಮದುವೆಯಾಗಿ ಅದರಿಂದ ಮಕ್ಕಳನ್ನು ಕೂಡ ಹೊಂದಿದ್ದಾನೆ. ಮೊದಲ ಪತ್ನಿ ಮತ್ತು ಮಕ್ಕಳು ಮಹಾರಾಷ್ಟ್ರದ ಪಲ್ತಾನ್ ಗ್ರಾಮದಲ್ಲಿ ನೆಲೆಸಿದ್ದಾರೆ. ಕೆಲ ವರ್ಷಗಳ ಹಿಂದೆ ಕೆಲಸಕ್ಕಾಗಿ ತನ್ನೂರಿಗೆ ಬಂದ ಅಜಯ್ ಜ್ಯೋತಿಯನ್ನು ವಿವಾಹವಾಗಿದ್ದನು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ಶಿವಮೊಗ್ಗ: 10 ಕಿಲೋ ವ್ಯಾಟ್ FM ಟ್ರಾನ್ಸ್ಮಿಟರ್ ಕೇಂದ್ರ ಉದ್ಘಾಟನೆ! ಆಕಾಶವಾಣಿ, ದೂರದರ್ಶನ ಅಭಿವೃದ್ದಿಗೆ 2,500 ಕೋಟಿ ಹಣ ವೆಚ್ಚ- ಡಾ. ಎಲ್ ಮುರುಗನ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

SCROLL FOR NEXT