ಹಳ್ಳಿಯಿಂದ ದೆಹಲಿವರೆಗೆ: ನಿಷ್ಠೆ, ವಿನಮ್ರತೆಯಿಂದ ಉನ್ನತ ಮಟ್ಟಕ್ಕೆ ಬೆಳೆದಿದ್ದ ಜಾಫರ್ ಶರೀಫ್ 
ರಾಜ್ಯ

ಹಳ್ಳಿಯಿಂದ ದೆಹಲಿವರೆಗೆ: ನಿಷ್ಠೆ, ವಿನಮ್ರತೆಯಿಂದ ಉನ್ನತ ಮಟ್ಟಕ್ಕೆ ಬೆಳೆದಿದ್ದ ಜಾಫರ್ ಶರೀಫ್

ನಿಷ್ಠೆ ಹಾಗೂ ವಿನಮ್ರತೆಯಿದ್ದರೆ ಸಾಮಾನ್ಯ ವ್ಯಕ್ತಿ ಕೂಡ ಉನ್ನತ ಮಟ್ಟಕೇರಬಲ್ಲ ಎಂಬುದಕ್ಕೆ ಜಾಫರ್ ಶರೀಫ್ ಅವರು ಬಹುದೊಡ್ಡ ಉದಾಹರಣೆಯಾಗಿದ್ದರು...

ಬೆಂಗಳೂರು: ನಿಷ್ಠೆ ಹಾಗೂ ವಿನಮ್ರತೆಯಿದ್ದರೆ ಸಾಮಾನ್ಯ ವ್ಯಕ್ತಿ ಕೂಡ ಉನ್ನತ ಮಟ್ಟಕೇರಬಲ್ಲ ಎಂಬುದಕ್ಕೆ ಜಾಫರ್ ಶರೀಫ್ ಅವರು ಬಹುದೊಡ್ಡ ಉದಾಹರಣೆಯಾಗಿದ್ದರು. 
ಚಿತ್ರದುರ್ಗ ಜಿಲ್ಲೆಯ ಚೆಳ್ಳಕೆರೆ ಶರೀಫ್ ಅವರು ಹುಟ್ಟೂರಾಗಿದ್ದು, 1933 ನವೆಂಬರ್ 3 ರಂದು ಜನಸಿದ್ದರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಶರೀಫ್ ಅವರು ರಾಜಕೀಯದಲ್ಲಿ ಅನೇಕ ಏಳುಬೀಳುಗಳನ್ನು ನೋಡಿದ್ದರು. 
ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಶರೀಫ್ ಅವರು, ನಿಜಲಿಂಗಲ್ಲ ಅವರಿಗೆ ಆಪ್ತರಾಗಿದ್ದರು. ಶರೀಫ್ ಅವರು ತುಂಬಾ ತೀಕ್ಷ್ಣ ಹಾಗೂ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿದ್ದರು. 
ನಿಜಲಿಂಗಪ್ಪ ಅವರ ಜೊತೆಗಿದ್ದು, ಅವರ ವಿಶ್ವಾಸ ಗಳಿಸುತ್ತಲೇ ರಾಜಕೀಯ ಪಟ್ಟುಗಳನ್ನು ಕಲಿತರು. ವಿಶೇಷವೆಂದರೆ ಶರೀಫ್ ಅವರು ಸೇವಾದಳದ ಮೂಲಕ ರಾಜಕೀಯ ಪ್ರವೇಶ ಮಾಡುತ್ತಾರೆ. ನಂತರ ಯುವ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದನ್ನು ಬಿಟ್ಟರೆ, ಸ್ಥಳೀಯ ಅಥವಾ ಜಿಲ್ಲಾ ಮಟ್ಟದಲ್ಲಿ ಪಕ್ಷದ ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿಲ್ಲ. 
1960-70 ದಶಕ ಕಾಂಗ್ರೆಸ್ ಪಾಲಿಗೆ ಮಹತ್ವದ ಕಾಲಘಟ್ಟವಾಗಿತ್ತು. ನಿಜಿಲಿಂಗಪ್ಪ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ 1968ರಲ್ಲಿ ಆಯ್ಕೆ ಮಾಡಲಾಗಿತ್ತು. ಈ ವೇಳೆ ಕರ್ನಾಟಕದಿಂದ ಆಯ್ಕೆಯಾದ ಕಾಂಗ್ರೆಸ್'ನ ಏಕೈಕ ಅಧ್ಯಕ್ಷ ಎಂಬ ಕೀರ್ತಿ ನಿಜಲಿಂಗಪ್ಪ ಅವರಿಗೆ ಸಲ್ಲಿತು. ಆದರೆ, ನಿಜಲಿಂಗಪ್ಪ ಅವರು ಅಧ್ಯಕ್ಷರಾದ ಅವಧಿಯಲ್ಲೇ ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದು ನಡೆಯಿತು. ಹೀಗಾಗಿ 1969ರಲ್ಲಿ ಇಂದಿರಾ ಗಾಂಧಿ ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಧಾರಕ್ಕೆ ನಿಜಲಿಂಗಪ್ಪ ಅವರು ಬಂದರು. 
1959ರಲ್ಲಿ ಕಾಂಗ್ರೆಸ್ ವಿಶೇಷ ಅಧಿವೇಶನದ ಅಧ್ಯಕ್ಷೆಯಾಗಿ ಇಂದಿರಾ ಗಾಂಧಿಯವರನ್ನು ಆಯ್ಕೆ ಮಾಡಲಾಗಿತ್ತು. ನಂತರ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ 1966ರಲ್ಲಿ ನಿಧನರಾದರು. ಬಳಿಕ ಸಂಸದೀಯ ಪಕ್ಷದ ನಾಯಕರಾಗಿ ಇಂದಿರಾ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ 1966ರಿಂದ 71ರವರೆಗಿನ ಆಡಳಿತಾವಧಿಯಲ್ಲಿ ಪಕ್ಷದ ಹಲವಾರು ಮುಖಂಡರು ಇಂದಿರಾ ಗಾಂಧಿಯವರನ್ನು ಎದುರು ಹಾಕಿಕೊಂಡರು. 
ಇಲ್ಲಿಂದ ನಿಜಲಿಂಗಪ್ಪ ಹಾಗೂ ಇಂದಿರಾಂಧಿ ನಡುವೆ ಅಂತರ ಹೆಚ್ಚಾಗಿ ಪಕ್ಷ ವಿಭಜನೆಯಾಗುತ್ತದೆ. ಅಲ್ಲಿಯವರೆಗೂ ನಿಜಲಿಂಗಪ್ಪ ಅವರ ಜೊತೆಗಿದ್ದ ಶರೀಫ್ ಅವರು ಇಂದಿರಾಗಾಂಧಿ ಪರವಾಗಿ ನಿಲ್ಲುವ ಮೂಲಕ ಮತ್ತಷ್ಟು ಹತ್ತಿರವಾಗುತ್ತಾರೆ. ಇದರ ಪರಿಣಾಮ 1971ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗುತ್ತದೆ. 
ನಿಜಲಿಂಗಪ್ಪ ಅವರ ಅಳಿಯರಾಗಿದ್ದ ರಾಜಶೇಖರನ್ ಅವರನ್ನು ಶರೀಫ್ ಪರಾಭವಗೊಳಿಸುತ್ತಾರೆ. ನಂತರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 7 ಬಾರಿ ಗೆಲುವು ಸಾಧಿಸುತ್ತಾರೆ. ಒಟ್ಟಾರೆ 8 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದ ಶರೀಫ್, ಇಂದಿರಾಗಾಂಧಿ ಅವರ ವಿಶ್ವಾಸ ಗಳಿಸುವ ಮೂಲಕ ಅನೇಕ ವರ್ಶಗಳ ಕಾಲ ರಾಷ್ಟ್ರಮಟ್ಟದಲ್ಲಿ ಪಕ್ಷ ಹಾಗೂ ಆಡಳಿತದಲ್ಲಿ ಮಹತ್ವದ ಹುದ್ದೆಗಳನ್ನು ಪಡೆದಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

'ಅಜ್ಮೀರ್' ದರ್ಗಾ ಶಿವ ದೇಗುಲವಾಗಿತ್ತು: ಕೋರ್ಟ್ ಮೆಟ್ಟಿಲೇರಿದ ವಿವಾದ!

'ವಿಬಿ-ಜಿ-ರಾಮ್' ಕಾಯ್ದೆ ವಿರುದ್ಧ ಕಾನೂನು ಸಮರ: ವಿಶೇಷ ಅಧಿವೇಶನ ಕರೆದು ಚರ್ಚೆ- ಸಿಎಂ ಸಿದ್ದರಾಮಯ್ಯ

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT