ಪ್ರೀತ್ಸೋಕೆ ಒಪ್ಪದ ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ! 
ರಾಜ್ಯ

ದೊಡ್ಡಬಳ್ಳಾಪುರ: ಪ್ರೀತ್ಸೋಕೆ ಒಪ್ಪದ ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಂದ!

ತನ್ನನ್ನು ಪ್ರೀತಿಸಲು ಒಪ್ಪದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಂಬಂಧಿಯೇ ನಡುರಸ್ತೆಯಲ್ಲಿ ಮಚ್ಚಿನಿಂದ ಹೊಡೆದು ಕೊಂದಿರುವ ಭೀಕರ ಘಟನೆ ದೊಡ್ಡಬಳ್ಳಾಪುರದ ಗಂಗಾಧರಪುರದಲ್ಲಿ ನಡೆದಿದೆ.

ಬೆಂಗಳೂರು: ತನ್ನನ್ನು ಪ್ರೀತಿಸಲು ಒಪ್ಪದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸಂಬಂಧಿಯೇ ನಡುರಸ್ತೆಯಲ್ಲಿ ಮಚ್ಚಿನಿಂದ ಹೊಡೆದು ಕೊಂದಿರುವ ಭೀಕರ ಘಟನೆ ದೊಡ್ಡಬಳ್ಳಾಪುರದ ಗಂಗಾಧರಪುರದಲ್ಲಿ ನಡೆದಿದೆ. ವಿದ್ಯಾರ್ಥಿನಿಯನ್ನು ಕೊಂದು ದುಷ್ಕರ್ಮಿ ನಂತರ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬುಧವಾರ ಬೆಳಿಗ್ಗೆ ನಡೆದ ಪ್ರಕರಣದಲ್ಲಿ ವಿನಾಯಕನಗರದ ನಿವಾಸಿ ಕೀರ್ತನಾ (15)  ಸಾವನ್ನಪ್ಪಿದ್ದಾಳೆ.ನಡುಹಗಲೇ ನಡೆದ ಈ ಭೀಕರ ಘಟನೆಯಿಂದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಘಟನೆ ವಿವರ
ದೊಡ್ಡಬಳ್ಳಾಪುರದ ಬಿಎಸ್ ಎ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ಕೀರ್ತನಾಳನ್ನು ಆಕೆಯ ದೂರದ ಸಂಬಂಧಿಯಾಗಿದ್ದ ನವೀನ್ ಪ್ರೀತಿಸುತ್ತಿದ್ದ ಎನಲಾಗಿದೆ ಈತ ಇಂದು ಬೆಳಿಗ್ಗೆ ಕೀರ್ತನಾ ಶಾಲೆಗೆ ಹೊರಟಾಗ ಹಿಂಬಾಲಿಸಿ ಬಂದಿದ್ದು ರಸ್ತೆಯಲ್ಲೇ ಆಕೆಯನ್ನು ಅಡ್ಡಗಟ್ಟಿ ಮಚ್ಚಿನಿಂದ ಹೊಡೆದು ಕೊಂದು ಹಾಕಿದ್ದಾನೆ. ಬಳಿಕ ತಾನು ಮನೆಗೆ ಓಡಿ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.
ಸದ್ಯ ಆರೋಪಿ ನವೀನ್ ನನ್ನು ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೃತ ಕೀರ್ತನಾ ಹಾಗೂ ನವೀನ್ ಸಂಬಂಧಿಗಳಾಗಿದ್ದು ಕೀರ್ತನಾಗೆ 18 ವರ್ಷ ತುಂಬಿದ ಬಳಿಕ ಇಬ್ಬರಿಗೆ ವಿಒವಾಹ ಮಾಡಬೇಕೆಂದು ಮನೆಯವರು ನಿರ್ಧರಿಸಿದ್ದರು. ಆದರೆ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ನವೀನ್ ನನ್ನು ವಿವಾಹವಾಗಲು ಕೀರ್ತನಾಗೆ ಇಷ್ಟವಿರಲಿಲ್ಲ. ಆಕೆ ಮದುವೆ ಪ್ರಸ್ತಾಪವನ್ನು ಒಲ್ಲೆ ಎಂದಿದ್ದಳು. ಆದರೆ ಅವಳಿನ್ನೂ ಚಿಕ್ಕ ವಯಸ್ಸಿನವಳಾದ ಕಾರಣ ಇಂದಲ್ಲ ನಾಳೆ ಮದುವೆಗೆ ಒಪ್ಪಿಗೆ ಸೂಚಿಸಲಿದ್ದಾಳೆಂದು ಎಲ್ಲರೂ ಭಾವಿಸಿದ್ದರು.
ಆದರೆ ಇತ್ತೀಚೆಗೆ ಕೀರ್ತನಾ ಬೇರೊಬ್ಬನನ್ನು ಪ್ರೀತಿಸುತ್ತಿದ್ದ ವಿಚಾರ ನವೀನ್ ಹಾಗೂ ಮನೆಯವರಿಗೆ ತಿಳಿದಿದೆ. ಇದರಿಂದ ಆಕ್ರೋಶಗೊಂಡ ನವೀನ್ ಕೀರ್ತನಾಗೆ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದ ಆಕೆಯನ್ನು ಇಂದು ಬೆಳಿಗ್ಗೆ ಹಿಂಬಾಲಿಸಿ ಮಚ್ಚಿನಿಂದ ಕುತ್ತಿಗೆಗೆ ಹೊಡೆದು ಕೊಂದಿದ್ದಾನೆ. ಹೊಡೆತ ತಿಂದ ಕೀರ್ತನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಮೃತ ಕೀರ್ತನಾಳ ಅಕ್ಕನನ್ನು ಆರೋಪಿ ನವೀನ್ ತಮ್ಮ ಅರುಣ್ ವಿವಾಹವಾಗಿದ್ದ ಕಾರಣ ಕೀರ್ತನಾಗೆ ನವೀನ್ ಭಾವನಾಗುತ್ತಾನೆ ಎನ್ನಲಾಗಿದೆ.ಇದರಿಂದ ಆತನಿಗೆ ಕೀರ್ತನಾಳನು ವಿವಾಹವಾಗುವ ಬಯಕೆ ಇತ್ತು. ಇದಕ್ಕೆ ಎರಡೂ ಕುಟುಂಬದವರೂ ಸಹ ಕೆಲ ಬಾರಿ ಒಪ್ಪಿದಂತೆ ಮಾಡಿದರೂ ಇನ್ನೂ ಕೆಲವೊಮ್ಮೆ ನಿರಾಕರಿಸಿದ್ದರು.
ದೊಡ್ಡಬಳ್ಳಾಪುರ ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ