ರಾಜ್ಯ

ರಾಜ್ಯೋತ್ಸವ ಪ್ರಶಸ್ತಿಯಿಂದ ಬರುವ ಹಣವನ್ನು ಕೆರೆಗಳಿಗಾಗಿಯೇ ಬಳಸುತ್ತೇನೆ: ಕೆರೆಗಳ ಹರಿಕಾರ ಕಾಮೇಗೌಡ

Shilpa D
ಬೆಂಗಳೂರು: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕುರಿಗಾಹಿ 82 ವರ್ಷದ ಕಾಮೇಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ,
ತಮ್ಮ 40 ವರ್ಷಗಳ ಬದುಕಿನಲ್ಲಿ ಕಾಮೇಗೌಡ ಸುಮಾರು 14 ಕೆರೆಗಳನ್ನು  ತಮ್ಮ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದಾರೆ, ಗುರುವಾರ ಕಾಮೇಗೌಡ ಅವರು 63 ಮಂದಿಯಲ್ಲಿ ಒಬ್ಬರಾಗಿದ್ದಾರೆ. ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ  ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ,
ಜುಲೈ15 ರಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮೊದಲ ಬಾರಿಗೆ ಕಾಮೆಗೌಡ ಅವರ ಸಾದನೆ ಬಗ್ಗೆ ಪ್ರಕಟಿಸಿತ್ತು, ಕಾಮೇಗೌಡ ಅವರು ಯಾವುದೇ ರೀತಿಯ ಶಿಕ್ಷಣ ಪಡೆದಿಲ್ಲ,  ಹೀಗಿದ್ದರೂ ಅವರು ತಮ್ಮ ಗ್ರಾಮದಲ್ಲಿ 14 ಕೆರೆಗಳನ್ನು ಸ್ಥಾಪಿಸಿ ಜಿಲ್ಲೆಯಲ್ಲಿ ಬೇಸಿಗೆಯಲ್ಲೂ  ಕೆರೆಯಲ್ಲಿ ನೀರು ತುಂಬಿರುವಂತೆ ಮಾಡಲು ಕಾರಣರಾಗಿದ್ದಾರೆ,.
ಇದು ನಮ್ಮ ತಾಯಿಗೆ ಮಾಡುವ ಸೇವೆ, ನಮಾವು ಮನುಷ್ಯರು ನೀರನ್ನು ಖರೀದಿಸಿ ಬಳಸುತ್ತೇವೆ, ಆದರೆ ಪ್ರಾಣಿಪಕ್ಷಿಗಳು ಹೇಗೆ ನೀರನ್ನು ಪಡೆಯುತ್ತವೆ ಎಂದು ಪ್ರಶ್ನಿಸಿದ್ದರು,. ರಾಜ್ಯೋತ್ಸವ ಪ್ರಶಸ್ತಿ ಅಂಗವಾಗಿ ಸರ್ಕಾರ ಕೊಡುವ 1ಲಕ್ಷ ರು ಹಣವನ್ನು ಕೆರೆಗಳಿಗಾಗಿಯೇ ಬಳಸುವುದಾಗಿ ಹೇಳಿದ್ದಾರೆ. 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ಕಾಮೇಗೌಡ ಅವರ ಮನೆಗೆ ಭೇಟಿ ನೀಡಿದಾಗ ಅವರು ತಮ್ಮ ಮನೆಯ ಹಸುವಿನ ಕೊಟ್ಟಿಗೆಯಲ್ಲಿ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗದಿದ್ದರು.  ತಮ್ಮ ಕುಟುಂಬ ಸದಸ್ಯರು ಕೆರೆಗಳಿಗಾಗಿ ಹಣ ಖರ್ಚು ಮಾಡುವುದನ್ನು ನಿಲ್ಲಿಸಿ, ಅದೇ ಹಣವನ್ನು ಮನೆ ಖರ್ಚಿಗೆ ನೀಡಬೇಕೆಂದು ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ, ತಮಗೆ ಬಂದ ಎಲ್ಲಾ ಪ್ರಶಸ್ತಿಗಳ ಹಣವನ್ನು ಕೆರೆ ಗಳಿಗಾಗಿಯೇ ಕಾಮೇಗೌಡ ಖರ್ಚು ಮಾಡಿದ್ದಾರೆ. 
ತಮ್ಮ ಮನೆಯನ್ನು ರಿಪೇರಿ ಮಾಡಿಸುವುದು ತಮ್ಮ ಕೊನೆಯ ಆದ್ಯತೆ ಎಂದು ಕಾಮೇಗೌಡ ಹೇಳಿದ್ದಾರೆ, ನಾನು ಬದುಕಿರುವವರೆಗೂ ನಾನು ಕೆರೆಗಳ ಬಗ್ಗೆಯೇ ಚಿಂತಿಸುತ್ತಿರುತ್ತೇನೆ ಎಂದು ಹೇಳಿದ್ದಾರೆ.
SCROLL FOR NEXT