ಬೆಂಗಳೂರು: ಟೆಂಪೋ ಹರಿದು ರಸ್ತೆ ದಾಟುತ್ತಿದ್ದ 40 ವರ್ಷದ ನರರೋಗ ತಜ್ಞೆಯೊಬ್ಬರು ಮೃತಪಟ್ಟ ದಾರುಣ ಘಟನೆ ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜ್ ಬಳಿ ನಡೆದಿದೆ.
ರಾಜರಾಜೇಶ್ವರಿ ನಗರದ ನಿವಾಸಿ ಡಾ. ಪುರ್ಣಿಮಾ ಶೇಖರ್ ಅವರು ಎಂವಿಜೆ ಆಸ್ಪತ್ರೆಯ ಮಿದುಳು ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಬುಧವಾರ ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಟೆಂಪೋವೊಂದು ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು ವೈದ್ಯೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಟೆಂಪೋ ಚಾಲಕ ನಾಪತ್ತೆಯಾಗಿದ್ದಾರೆ.