ಬೆಂಗಳೂರು: ನಿವೃತ್ತ ಡಿಜಿಪಿ ಸಿ. ದಿನಕರನ್ (77) ಗುರುವಾರ ನಿಧನರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ದಿನಕರನ್ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಇಂದಿರಾನಗರದ ಕಲ್ಲಪಳ್ಳಿ ರುದ್ರಭೂಮಿಯಲ್ಲಿ ಮೃತರ ಅಂತ್ಯಸಂಸ್ಕಾರ ನೆರವೇರಿಸಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ.
ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಕಾನೂನು ಹೋರಾಟ ನಡೆಸಿ ಡಿಜಿಪಿ ಹುದ್ದೆಗೇರಿದ್ದರು.ವೀರಪ್ಪನ್ ನಿಂದ ಡಾ. ರಾಜ್ ಅಪಹರಣವಾದಾಗ ರಾಜ್ ಬಿಡುಗಡೆ ವಿಚಾರವಾಗಿ ಸರ್ಕಾರ ಯಾವ ಪಾತ್ರ ವಹಿಸಿತ್ತು ಎನ್ನುವ ಕುರಿತಂತೆ ಪುಸ್ತಕ ಪ್ರಕಟಿಸಿ ವಿವಾದಕ್ಕೀಡಾಗಿದ್ದರು.