ರಾಜ್ಯ

ಪೋಲಿಯೋ ಲಸಿಕೆಯಲ್ಲಿ ಟೈಪ್‌ 2 ಪೋಲಿಯೋ ವೈರಾಣು: ಆತಂಕ ಪಡುವ ಅಗತ್ಯವಿಲ್ಲ; ರಾಜ್ಯ ಆರೋಗ್ಯ ಇಲಾಖೆ

Shilpa D
ಬೆಂಗಳೂರು: ಗಾಜಿಯಾಬಾದ್ ಮೂಲದ ಬಯೊಮೆಡ್ ಕಂಪನಿ ತಯಾರಿಸುವ ಪೊಲೀಯೋ ಲಸಿಕೆಯಲ್ಲಿ  ಟೈಪ್-2 ವೈರಾಣು ಪತ್ತೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್ ಹಾಗೂ ಫೇಸ್ ಬುಕ್ ನಲ್ಲಿ, ಮಕ್ಕಳಿಗೆ ಲಸಿಕೆ ಹಾಕದಂತೆ ಪೋಷಕರಿಗೆ ಮನವಿ ಮಾಡಿರುವ ಸಂದೇಶಗಳು ಹರಿದಾಡುತ್ತಿದ್ದು, ರಾಜ್ಯದ ಜನತೆ ಆತಂಕದಲ್ಲಿ ಮುಳುಗಿದ್ದಾರೆ.
ಕರ್ನಾಟಕ ಸರ್ಕಾರ ಕೂಡ ಬಯೋಮೆಡ್ ನಿಂದ ಮೂರು ಬ್ಯಾಚ್ ಗಳಲ್ಲಿ ಸುಮಾರು 50 ಸಾವಿರ ಬಾಟಲುಗಳನ್ನು ರಾಜ್ಯಕ್ಕೆ ತರಿಸಿದೆ, ರಾಜ್ಯದಲ್ಲಿ ದೊರಕುವ ಲಸಿಕೆ ಸುರಕ್ಷಿತವಾಗಿದೆ 'ಟೈಪ್‌ 2 ಪೋಲಿಯೋ ವೈರಾಣು' ಪತ್ತೆಯಾಗಿರುವ ಪೋಲಿಯೋ ಲಸಿಕೆಯನ್ನು ರಾಜ್ಯದಲ್ಲಿ ಯಾವ ಮಕ್ಕಳಿಗೂ ಹಾಕಿಲ್ಲ. ಹೀಗಾಗಿ ಪೋಷಕರು ಆತಂಕಪಡುವ ಅಗತ್ಯವಿಲ್ಲ  ಎಂದು ರಾಜ್ಯ ಆರೋಗ್ಯ ಇಲಾಖೆ ನಿರ್ದೇಶಕ ಎಸ್ ಪುಷ್ಪರಾಜ್ ಹೇಳಿದ್ದಾರೆ.
ಪೋಲಿಯೋ ನಿವಾರಣೆಗಾಗಿ ಪ್ರತಿ ವರ್ಷವೂ ಭಾರತ ಸರಕಾರ ಎರಡು ಬಾರಿ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಆದರೆ ಉತ್ತರ ಪ್ರದೇಶದ ಘಾಜಿಯಾಬಾದ್‌ನ ಬಯೋಮೆಡ್‌ ಘಟಕದಲ್ಲಿ ಉತ್ಪಾದನೆಯಾಗಿರುವ 1.5 ಲಕ್ಷ ಬಾಟಲಿ ಲಸಿಕೆಗಳಲ್ಲಿ ಟೈಪ್‌ 2 ಪೋಲಿಯೋ ವೈರಸ್‌ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಬ್ರಿವಲೆಂಟ್‌ ಲಸಿಕೆ 2016ರ ಏಪ್ರಿಲ್‌ನಲ್ಲಿ ಉತ್ತರ ಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಪೂರೈಕೆಯಾಗಿದೆ. ಈ ಬ್ಯಾಚ್‌ನ ಔಷಧ ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ. ಹೀಗಾಗಿ ರಾಜ್ಯದ ಮಕ್ಕಳು ಸರಕ್ಷಿತರಾಗಿದ್ದಾರೆ. ಹೀಗಾಗಿ ಪೋಷಕರು ಹೆದರದೆ ಆತಂಕ ಪಡದೇ ಲಸಿಕೆ ಹಾಕಿಸಿ ಎಂದು ಮನವಿ ಮಾಡಿದ್ದಾರೆ.
ಪೋಲಿಯೋ ರೋಗದಲ್ಲಿ ಮೂರು ವಿಧಗಳಿದ್ದು ಪಿ1, ಪಿ2, ಪಿ3 ಎಂದು ಗುರುತಿಸಲಾಗಿದೆ. ಆದರೆ, ಸಮರ್ಪಕವಾಗಿ ತೊಲಗದ ಟೈಪ್‌2 ಪೋಲಿಯೋ ನಿವಾರಣೆಗಾಗಿ 2016ರ ಏಪ್ರಿಲ್‌ನಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ಹೊಸ ಲಸಿಕೆ ಪ್ರಾರಂಭಿಸಲಾಗಿತ್ತು. ಇನ್ನು ಪೋಲಿಯೋ ಹನಿಗಳಲ್ಲಿ ಟ್ರಿವಲೆಂಟ್‌ ಹಾಗೂ ಬಿವಲೆಂಟ್‌ ಒಪಿವಿ ಎಂದು ರಡು ಬಗೆಗಳಿವೆ. ಬಿವಲೆಂಟ್‌ ಒಪಿವಿ ಲಸಿಕೆಯನ್ನು ಪಿ1, ಪಿ3 ಪೋಲಿಯೋ ನಿರ್ಮೂಲನೆಗೆ ಹಾಕಲಾಗುತ್ತದೆ. ಟೈಪ್‌ 2 ಪೋಲಿಯೋ (ಪಿ2) ನಿವಾರಣೆಗಾಗಿ 2016ರಲ್ಲಿ ಟ್ರಿವಲೆಂಟ್‌ ಟ್ರಿವಲೆಂಟ್‌ ಒಪಿವಿ ಲಸಿಕೆಯನ್ನು ಪರಿಚಯಿಸಲಾಯಿತು. ಇದರಲ್ಲಿಪಿ1, ಪಿ2, ಪಿ3 ಪೊಲೀಯೋ ನಿವಾರಣೆ ಗುಣಗಳಿವೆ ಎಂದು ಮಕ್ಕಳ ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ. ಪ್ರಭು ಗೌಡ ಹೇಳಿದ್ದಾರೆ.
SCROLL FOR NEXT