ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ: ಮಂಗನ ಕೈಗೆ ಸ್ಟಿಯರಿಂಗ್ ಕೊಟ್ಟ ಚಾಲಕನ ಅಳಲು 
ರಾಜ್ಯ

ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ: ಮಂಗನ ಕೈಗೆ ಸ್ಟಿಯರಿಂಗ್ ಕೊಟ್ಟ ಚಾಲಕನ ಅಳಲು

ಘಟನೆ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಪ್ರಕಾಶ್, "ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ: ಕೋತಿಯೊಂದು ಚಾಲಕನೊಂದಿಗೆ ಸ್ಟಿಯರಿಂಗ್‌ ಮೇಲೆ ಕುಳಿತು ತಾನೂ ಡ್ರೈವಿಂಗ್‌ ಮಾಡಿದ್ದ ವಿಡಿಯೋ ಎಲ್ಲರಿಗೂ ನೆನಪಿರಲೇಬೇಕು. ನಂತರ ಅಧಿಕಾರಿಗಳು ಚಾಲನವ ವಿರುದ್ಧ ಕ್ರಮವನ್ನೂ ಕೈಗೊಂಡಿದ್ದರು. ಈಗ ಚಾಲಕ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನನ್ನದೇನು ತಪ್ಪಿಲ್ಲಾ ಎನ್ನುತ್ತಿದ್ದಾರೆ. 
ಘಟನೆ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಪ್ರಕಾಶ್, "ನಾನು ಮಾಡದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 6 ಜನರಿರುವ ನನ್ನ ಕುಟುಂಬ ನನ್ನನ್ನು ಅಮಾನತುಗೊಳಿಸಿದ ಮೇಲೆ ಸಂಕಷ್ಟಕ್ಕೆ ಸಿಲುಕಿದೆ.  ಕಂಡೆಕ್ಟರ್ ಇದ್ದ ಕಡೆಯಿಂದ ಡ್ರೈವರ್ ಸೀಟ್ ನತ್ತ ಜಿಗಿದ ಮಂಗ ಏಕಾಏಕಿ ಸ್ಟಿಯರಿಂಗ್ ಮೇಲೆ ಕೂಳಿತುಕೊಂಡಿತು. ಅದನ್ನು ಓಡಿಸಲು ಯತ್ನಿಸಿದರೂ ಅಲ್ಲಿಂದ ಕದಲಲಿಲ್ಲ. ನಿರಂತರ 2 ಕಿ.ಮೀ ದೂರ ಅಲ್ಲೇ ಕುಳಿತಿದ್ದ ಮಂಗ ನಂತರ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಮೇಲೆ ಹಾರಿತು. ಪ್ರಾರಂಭದಲ್ಲಿ ನನಗೂ ಹೆದರಿಕೆ ಆಗಿತ್ತು" ಎಂದು ಹೇಳಿದ್ದಾರೆ. 
11 ವರ್ಷಗಳ ವೃತ್ತಿ ಜೀವನದಲ್ಲಿ ಪ್ರಕಾಶ್ ವಿರುದ್ಧ ಯಾವುದೇ ಆರೋಪಗಳಿಲ್ಲ. ಈಗ ತನ್ನದಲ್ಲದ ತಪ್ಪಿಗೆ ಶಿಕ್ಷೆ ಎದುರಿಸುತ್ತಿದ್ದೇನೆ ಎನ್ನುತ್ತಿರುವ ಪ್ರಕಾಶ್ ಬಡತನದ ಹಿನ್ನೆಲೆ ಹೊಂದಿದ್ದಾರೆ. ಪ್ರಕಾಶ್ ಅವರ ಬೆಂಬಲಕ್ಕೆ ಪ್ರಯಾಣಿಕರೂ ಸಹ ಧಾವಿಸಿದ್ದು, ಪ್ರಕಾಶ್ ಅವರ ತಪ್ಪು ಇಲ್ಲ ಎಂದಿದ್ದಾರೆ.  ಮಂಗ ಸ್ಟಿಯರಿಂಗ್ ಮೇಲೆ ಕೂತಿದ್ದ ಘಟನೆ ಆಕಸ್ಮಿಕವಾದದ್ದು ಪ್ರಕಾಶ್ ಉತ್ತಮ ಚಾಲಕ, ಆತನ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತವಲ್ಲ ಎಂದು ಪ್ರತಿ ದಿನ ಬಸ್ ನಲ್ಲಿ ಪ್ರಯಾಣಿಸುವ ತಿಮ್ಮಣ್ಣ ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ