ಹುಬ್ಬಳ್ಳಿ: ದೆವ್ವ ಭೂತದ ಕಥೆಗಳನ್ನು ಚಿಕ್ಕ ವಯಸ್ಸಿನಿಂದ ಕೇಳಿಕೊಂಡು ಬಂದಿದ್ದೇವೆ. ಇನ್ನು ಪ್ರೇತವೇ ದೇಹದಿಂದ ಹೊರಗೆ ಹೋಗುವ ಲೈವ್ ವಿಡಿಯೋ ನೋಡಿದರೆ ಹೇಗಾಗಬಹುದು. ಹೌದು ಹುಬ್ಬಳ್ಳಿಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿ ಹುಟ್ಟು ಹಬ್ಬದ ಸಂಭ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಪ್ರೇತ ಹೊರಬಂದಿದೆ. ಪ್ರತಾಪ್ ಎಂಬ ಯುವಕನ ದೇಹದಿಂದ ಪ್ರೇತ ಹೊರ ಹೋಗುತ್ತಿರುವುದು ಮೊಬೈಲ್ ನಲ್ಲಿ ಸೆರೆಯಾಗಿದ್ದು ಸದ್ಯ ವಿಡಿಯೋ ಸಖತ್ ವೈರಲ್ ಆಗಿದೆ.
ಪ್ರತಾಪ್ ದೇಹದಿಂದ ಪ್ರೇತ ಹೊರಗೆ ಬಂದ ಬಳಿಕ ವಿಚಿತ್ರವೆಂಬಂತೆ ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಪ್ರತಾಪ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಅಗಲಿದ ಗೆಳೆಯ ನೆನಪಿನಲ್ಲಿ ಹುಟ್ಟುಹಬ್ಬದ ಪಾರ್ಟಿ ವಿಡಿಯೋ ನೋಡುತ್ತಿದ್ದಾಗ ಪ್ರೇತ ದೇಹದಿಂದ ಹೊರ ಹೋಗುತ್ತಿರುವ ದೃಶ್ಯ ಸ್ನೇಹಿತರ ಗಮನಕ್ಕೆ ಬಂದಿದೆ.