ಸಿಎಂ ಹೆಚ್ ಡಿ ಕುಮಾರಸ್ವಾಮಿ, ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ(ಸಂಗ್ರಹ ಚಿತ್ರ) 
ರಾಜ್ಯ

ಸಮ್ಮಿಶ್ರ ಸರ್ಕಾರದ ಭವಿಷ್ಯ ಇನ್ನು ಎರಡೇ ತಿಂಗಳು: ಕೋಡಿಮಠದ ಸ್ವಾಮೀಜಿ

ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ರಾಜ್ಯ ಸಮ್ಮಿಶ್ರ ಸರಕಾರ ಶೀಘ್ರವೇ ಪತನವಾಗಲಿದೆ ....

ಹಾಸನ: ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ರಾಜ್ಯ ಸಮ್ಮಿಶ್ರ ಸರಕಾರ ಶೀಘ್ರವೇ ಪತನವಾಗಲಿದೆ ಎಂದು  ಕೋಡಿಮಠದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜ್ಯ ಮೈತ್ರಿ ಸರ್ಕಾರದ ಭವಿಷ್ಯ ಇನ್ನೆರಡು ತಿಂಗಳು ಮಾತ್ರ ಎಂದು ಕೂಡ ಹೇಳಿದ್ದಾರೆ.

ರಾಜ್ಯ ಸಮ್ಮಿಶ್ರ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಅದು 5 ವರ್ಷ ಆಳ್ವಿಕೆ ನಡೆಸುವುದಿಲ್ಲ, ಆರು ತಿಂಗಳು ಮಾತ್ರ ಎಂದು ಪದೇ ಪದೇ ಮಾಧ್ಯಮಗಳಲ್ಲಿ ಸುದ್ದಿ ಬರುತ್ತಲೇ ಇವೆ. ಅನೇಕ ಸ್ವಾಮೀಜಿಗಳು ಕೂಡ ಇದಕ್ಕೆ ದನಿಗೂಡಿಸುತ್ತಾರೆ. ರಾಜಕೀಯ ನಾಯಕರ ಭವಿಷ್ಯ ಹೇಳಿ ಸುದ್ದಿಯಾಗುವ ಕೋಡಿಮಠದ ಸ್ವಾಮೀಜಿ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.

ಅರಸೀಕೆರೆ ತಾಲೂಕು ಮಾಡಾಳು ಗ್ರಾಮದಲ್ಲಿ ಮಾತನಾಡಿದ ಅವರು, ಏನಾಗಲಿದೆ ಎಂಬುದನ್ನು ಮುಂದಿನ ನವೆಂಬರ್ ವರೆಗೆ ಕಾದು ನೋಡಿ, ಅಧಿಕಾರಕ್ಕಾಗಿ ಮತ್ತೊಬ್ಬ ಅಣ್ಣ ಹುಟ್ಟಿಕೊಳ್ಳಲಿದ್ದಾನೆ ಎಂಬ ಕುತೂಹಲ ಕಾತರವನ್ನು ರಾಜ್ಯದ ಜನತೆ ಮುಂದಿಟ್ಟಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ರೀತಿಯಲ್ಲಿ ಮತ್ತೊಬ್ಬ ಗಣ್ಯ ನಾಯಕರು ನವೆಂಬರ್ ಒಳಗೆ ವಿಧಿವಶರಾಗಲಿದ್ದಾರೆ. ಆ ರೀತಿಯ ಸೂತಕ ಮುಂದುವರಿಯಲಿದೆ ಎಂದ ಸ್ವಾಮೀಜಿ, ಭ್ರಾತೃ ಬಲ ಹೆಚ್ಚಿತು ಎಂದು ಈ ಹಿಂದೆಯೇ ಹೇಳಿದ್ದೆ. ಅದರಂತೆ ಬೆಳಗಾವಿಯಲ್ಲೀಗ ಯಾರಿಂದ ಕಲಹ ನಡೆಯುತ್ತಿದೆ? ಎಂದು ಮರುಪ್ರಶ್ನೆ ಹಾಕಿದರು.

ಇನ್ನೂ ಅಂಥದೇ ಸಮಸ್ಯೆ ಭವಿಷ್ಯದಲ್ಲಿ ಸೃಷ್ಟಿಯಾಗಲಿದೆ. ನಾನು ಹೇಳಿದ್ದು ಯಾವುದೂ ಸುಳ್ಳಾಗಲ್ಲ. ಎಲ್ಲದಕ್ಕೂ ನವೆಂಬರ್ ವರೆಗೂ ಕಾದು ನೋಡಿ ಎಂದಷ್ಟೇ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್