ಸಾಂದರ್ಭಿಕ ಚಿತ್ರ 
ರಾಜ್ಯ

ಪ್ರೀತಿಗೆ ಪೋಷಕರ ಅಡ್ಡಿ: ವಿಷ ಸೇವಿಸಿದ ಪ್ರೇಮಿಗಳು, ಪ್ರೇಯಸಿ ಸಾವು ಪ್ರಿಯಕರ ಗಂಭೀರ!

ಪ್ರೀತಿಗೆ ಪೋಷಕರೌ ಅಡ್ಡಿಯಾಗುತ್ತಾರೆ ಎನ್ನುವ ಆತಂಕದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಪ್ರೇಯಸಿ ಸತ್ತು ಪ್ರಿಯಕರ ಆಸ್ಪತ್ರೆಗೆ ದಾಖಲಾಗಿರುವ ....

ಟಿ,ನರಸಿಪುರ: ಪ್ರೀತಿಗೆ ಪೋಷಕರೌ ಅಡ್ಡಿಯಾಗುತ್ತಾರೆ ಎನ್ನುವ ಆತಂಕದಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಪ್ರೇಯಸಿ ಸತ್ತು ಪ್ರಿಯಕರ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರು ಟಿ. ನರಸೀಪುರದ ತಾಯೂರು ಗ್ರಾಮದ ಬಳಿ ನಡೆದಿದೆ.
ಟಿ. ನರಸೀಪುರದ ಕಲಿಯೂರು ಗ್ರಾಮದ ಶ್ರೀಧರ್ ಅವರ ಪುತ್ರಿ ಸ್ವಾತಿ (18) ವಿಷ ಸೇವನೆ ಮಾಡಿ ಸಾವನ್ನಪ್ಪಿದ್ದರೆ ಪ್ರಿಯಕರ ಮಣಿಕಠ (19) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಲ್ಗಿದ್ದಾನೆ.
ಕೊಳ್ಳೆಗಾಲದ ಹಂಪಾಪುರ ರಾಜೇಂದ್ರ ನಾಯಕ ಎನ್ನುವವರ ಪುತ್ರ ಮಣಿಕಠ ಆಟೋ ಚಾಲಕನಾಗಿದ್ದ. ಕಲಿಯೂರು ಗ್ರಾಮದಲ್ಲಿದ್ದ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಈತನಿಗೆ ಅದೇ ಗ್ರಾಮದ ಮೂಗೂರು ಕಾಲೇಜಿನಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ ಸ್ವಾತಿಯೊಡನೆ ಪ್ರೇಮ ಚಿಗುರಿದೆ.
ಹಲವು ದಿನಗಳ ಕಾಲ ಪರಸ್ಪರರು ಪ್ರೀತಿಸುತ್ತಿದ್ದು ಏತನ್ಮಧ್ಯೆ ಈ ಪ್ರೇಮಿಗಳ ವಿಚಾರ ಸ್ವಾತಿಯ ಪೋಷಕರಿಗೆ ಗೊತ್ತಾಗಿದೆ. ಅವರು ಸ್ವಾತಿಗೆ ತಿಳಿಹೇಳಿದ್ದು ಮಣಿಕಂಠನ ಸಹವಾಸ ಬಿಡುವಂತೆ ಕೇಳಿದ್ದಾರೆ. ಇದರಿಂದ ಗಾಬರಿಯಾದ ಸ್ವಾತಿ ಮಣಿಗೆ ಕರೆಮಾಡಿ "ತನ್ನನ್ನು ದೂರವೆಲ್ಲಾದರೂ ಕರೆದೊಯ್ಯು, ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಬೆದರಿಕೆ ಹಾಕಿದ್ದಳೆನ್ನಲಾಗಿದೆ.
ಇಬ್ಬರ ನಡುವೆ ಮುಂದೆ ಯಾವ ರೀತಿ ಮಾತುಕತೆ ನಡೆದಿತ್ತು ಎನ್ನುವುದು ಸ್ಪಷ್ಟವಿಲ್ಲ.ಶನಿವಾರ ಬೆಳಗ್ಗೆ ಕಾಲೇಜಿಗೆ ಹೋದ ಯುವತಿ ಮನೆಗೆ ವಾಪಸಾಗಿರಲಿಲ್ಲ ಈ ವಿಚಾರವಾಗಿ ಸ್ವಾತಿ ಪೋಷಕರು ಮಣಿಕಠನ ವಿರುದ್ಧ ಬಿಳಿಗೆರೆ ಪೊಲೀಸ್​ ಠಾಣೆಯಲ್ಲಿ ಅಪಹರಣ ಪ್ರಕರಣವನ್ನೂ ದಾಖಲಿಸಿದ್ದಾರೆ. 
ಆದರೆ ಭಾನುವಾರ ಬೆಳಿಗ್ಗೆ ಐದರ ಸಮಯಕ್ಕೆ ತಾಯೂರು ಕಾಲುವೆ ಬಳಿ ಇಬ್ಬರೂ ವಿಷ ಸೇವನೆ ಮಾಡಿ ಒದ್ದಾಡುವಾಗ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದಾರೆ. ಸ್ಥಳೀಯರು ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದು ಪೋಲೀಸರು ಸ್ಥಳಕ್ಕೆ ಆಗಮಿಸುವ ಮುನ್ನವೇ ಸ್ವಾತಿ ಅಸುನೀಗಿದ್ದಾಳೆ. ಮಣಿಕಠನನ್ನು ಮೊದಲು ಟಿ. ನರಸೀಪುರ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮೈಸೂರು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಳಿಗೆರೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT