ಬೆಂಗಳೂರು: ಮೊದಲ ಪತಿಯ ನೆನಪಲ್ಲಿ ಸೆಲ್ಫಿ ವೀಡಿಯೋ ಮಾಡಿ ಮಹಿಳೆ ಆತ್ಮಹತ್ಯೆ! 
ರಾಜ್ಯ

ಬೆಂಗಳೂರು: ಮೊದಲ ಪತಿಯ ನೆನಪಲ್ಲಿ ಸೆಲ್ಫಿ ವೀಡಿಯೋ ಮಾಡಿ ಮಹಿಳೆ ಆತ್ಮಹತ್ಯೆ!

ಮಹಿಳೆಯೊಬ್ಬರು ತನ್ನ ಮೊದಲ ಪತಿಯನ್ನು ನೆನೆದು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವಿವೇಕ ನಗರದಲ್ಲಿ ನಡೆದಿದೆ.

ಬೆಂಗಳೂರು: ಮಹಿಳೆಯೊಬ್ಬರು ತನ್ನ ಮೊದಲ ಪತಿಯನ್ನು ನೆನೆದು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ವಿವೇಕ ನಗರದಲ್ಲಿ ನಡೆದಿದೆ.
ನೇಪಾಳಿ ಮೂಲದ ಮಹಿಳೆ ಅಂಕಿತಾ (32) ಭಾನುವಾರ ತ್ರಾತ್ರಿ ಆತ್ಮಹತ್ಯೆಗೆ ಶರಾನಾಗಿದ್ದಾರೆ.
ಮನೆಯಲ್ಲಿ ಯಾರು ಇಲ್ಲದ ವೇಳೆ ಅಂಕಿತಾ ತನ್ನ ಮೊಬೈಲಿನಲ್ಲಿ ವಿಡಿಯೋ ಮಾಡಿ ಮನೆಯಲ್ಲಿದ್ದ ಮರದ ಪಟ್ಟಿಗೆ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಅಂಕಿತಾ ಮೊದಲ ಪತಿಯಿಂದ ವಿಚ್ಚೇದನ ಪಡೆದು ಸೋನಂ ಎಂಬುವವನೊಡನೆ ವಿವಾಹವಾಗಿದ್ದರು. ಆದರೆ ಎರಡನೇ ಪತಿ ಹಾಗೂ ಅಂಕಿತಾ ನಡುವೆ ಮನಸ್ತಾಪವೆದ್ದಿದ್ದು ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಮುನ್ನ ಅಂಕಿತಾ ತನ್ನ ಮೊದಲ ಪತಿಯನ್ನು ನೆನೆದು ಕಣ್ಣಿರು ಹಾಕಿದ್ದಾರೆ.
ಮೊದಲನೇ ಪತಿಯನ್ನು ಬಿಟ್ಟು ತಪ್ಪು ಮಾಡಿದೆ ಎಂದು ಹೇಳಿರುವ ನೇಪಾಳಿ ಭಾಷೆಯ ಮೊಬೈಲ್ ಬೀಡಿಯೋ ಪತ್ತೆಯಾಗಿದೆ.ಅಲ್ಲದೆ ನಾನು ಆತ್ಮಹತ್ಯೆಗೆ ಶರಣಗುತ್ತಿದ್ದೇನೆ  ನನ್ನನ್ನು ಕ್ಷಮಿಸಿ ಎಂದು ಕುಟುಂಬದವರ ಕ್ಷಮೆ ಕೇಳಿರುವುದಾಗಿ ಪೋಲೀಸರು ಮಾಹಿತಿ ಒದಗಿಸಿದ್ದಾರೆ.
ಘಟನೆ ಸಂಬಂಧ ವಿವೇಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

BJP ತೊರೆಯಲು ಕಾರಣ ಬಹಿರಂಗಪಡಿಸಿದ Annamalai; ಮಾಜಿ ಐಪಿಎಸ್ ಅಧಿಕಾರಿ ಹೇಳಿದ್ದೇನೆಂದರೆ

SIR ಪ್ರಕ್ರಿಯೆಯಲ್ಲಿನ ಅನ್ಯಾಯ ತಡೆಗೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು: ಸಿಎಂ ಶಿವಕುಮಾರ್ ಗೆ ಪ್ರಕಾಶ್ ರಾಜ್ ಮನವಿ

BBK 13: 'ಅಗ್ನಿಪರೀಕ್ಷೆ' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಟಾರ್ಚರ್‌, ಭಾರಿ ಟ್ರೋಲ್, ಸಂಗೀತಾ ಸಮರ್ಥನೆ, ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’!