ದಾವಣಗೆರೆ: 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿರುವ ಕಬಡ್ಡಿ ಕೋಚ್ ರುದ್ರಪ್ಪ ಎಂಬುವರು ದಾವಣಗೆರೆಯ ಹರಿಹರ ಪಟ್ಟಣದಲ್ಲಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರ ಕರ್ನಾಟಕ ಮೂಲದ ಕೋಚ್ ರುದ್ರಪ್ಪ ಹೊಸಮನಿ ಅವರು ಬೆಂಗಳೂರಿನಲ್ಲಿ ಕಬಡ್ಡಿ ಕೋಚ್ ಆಗಿ ಕಾರ್ಯ ನಿರ್ವಹನಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
13 ವರ್ಷದ ಬಾಲಕಿ ಮೇಲೆ ರುದ್ರಪ್ಪ ಹೊಸಮನಿ ಅತ್ಯಾಚಾರವೆಸಗಿದ್ದಾರೆಂದು ದೂರನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಈ ಆರೋಪ ಹಿನ್ನಲೆ ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ರುದ್ರಪ್ಪ ನೇಣಿಗೆ ಶರಣಾಗಿದ್ದಾರೆ.
ರುದ್ರಪ್ಪ ಅವರು ಡೆಟ್ ನೋಟ್ ನಲ್ಲಿ ಪತ್ನಿ ಮತ್ತು ಮಗನಿಗೆ ತನ್ನನ್ನು ಕ್ಷಮಿಸಿ ಎಂದು ಬರೆದಿದ್ದಾರೆ. ನಿಮಗೆ ಬಹಳ ತೊಂದರೆ ಮಾಡಿದೆ. ಮೊಬೈಲ್ ಇಲ್ಲ. ನನ್ನ ಪರ್ಸ್ ನಲ್ಲಿ ನಿಮ್ಮಿಬ್ಬರ ಫೋಟೋನೂ ಇಲ್ಲ. ಬಹಳ ಬಹಳ ನೋಡಬೇಕೆನಿಸಿತ್ತು. ನನ್ನ ಅಮ್ಮ, ಬಂಧುಗಳಿಗೆ ಹಾಗೂ ನನ್ನ ಸ್ನೇಹಿತರಿಗೆ ನನ್ನ ಅಮೂಲ್ಯ ಧನ್ಯವಾದಗಳು. ದಯವಿಟ್ಟು ನಿಮಗೆ ತೊಂದರೆಯಾಗಿದೆ. ನನ್ನನ್ನು ಕ್ಷಮಿಸಿ, ನನ್ನ ದೇಹವನ್ನು ಯಾವುದಾದರೂ ಆಸ್ಪತ್ರೆಗೆ ದಾನ ಮಾಡಿ ಎಂದು ಬರೆದಿದ್ದಾರೆ.