ಬೆಂಗಳೂರು: ವಿಜಯದಶಮಿ ಸಂಭ್ರಮದಲ್ಲಿದ್ದ ಮೈಸೂರು ರಾಜವಂಶಸ್ಥರಿಗೆ ದುಃಖದ ಮೇಲೆ ದುಖ ಎದುಆಗಿದೆ. ಇಂದು ಬೆಳಿಗ್ಗೆಯಷ್ಟೇ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟಚಿನ್ನಮ್ಮಣಿ(98) ವಿಧುಇವಶರಾಗಿದ್ದರು. ಇದೀಗ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೋದರಿ ವಿಶಾಲಾಕ್ಷಿದೇವಿ (56) ಸಹ ನಿಧನರಾಗಿದ್ದಾರೆ. ಈ ಮೂಲಕ ಒಂದೇ ದಿನ ರಾಜ ಕುಟುಂಬದ ಇಬ್ಬರು ಪ್ರಮುಖರು ಅಸುನೀಗಿದಂತಾಗಿದೆ.
ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ವಿಶಾಲಾಕ್ಷಿದೇವಿ ಬಹು ಅಂಗಾಂಗ ವೈಫಲ್ಯದಿಂದ ಶುಕ್ರವಾರ ನಿಧನರಾದರೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಮೃತರಿಗೆ ಪತಿ, ಪುತ್ರ ಹಾಗೂ ಪುತ್ರಿಯರಿದ್ದಾರೆ. ಶನಿವಾರ ಮೈಸೂರು "ಖಾಸ್ ಮಧುವನ"ದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿದೆ.