ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ 
ರಾಜ್ಯ

ಲಕ್ಷ್ಮಿಮಂಟಪಕ್ಕೆ ಮಹಿಳಾ ಅಧಿಕಾರಿ ಪ್ರವೇಶ: ಕೊಲ್ಲೂರಿನಲ್ಲಿ ಮತ್ತೊಂದು ವಿವಾದ!

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಕ್ಷೇತ್ರದಲ್ಲಿ ದೇವಾಲಯದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಟಿ.ಆರ್‌.ಉಮಾ ಅವರು ಅನುಮತಿ ಇಲ್ಲದೆ ಗರ್ಭಗುಡಿಯ ...

ಮಂಗಳೂರು:  ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿ ಕ್ಷೇತ್ರದಲ್ಲಿ ದೇವಾಲಯದ ಮಾಜಿ ಕಾರ್ಯ ನಿರ್ವಹಣಾಧಿಕಾರಿ ಟಿ.ಆರ್‌.ಉಮಾ ಅವರು ಅನುಮತಿ ಇಲ್ಲದೆ ಗರ್ಭಗುಡಿಯ ಲಕ್ಷ್ಮೀಮಂಟಪದವರೆಗೆ ಪ್ರವೇಶಿಸಿದ್ದು ವಿವಾದ ಹುಟ್ಟು ಹಾಕಿದೆ.
ಅ.16ರಂದು ಹಾಲಿ ಕಾರ್ಯ ನಿರ್ವಹಣಾಧಿಕಾರಿ ಹಾಲಪ್ಪನವರ ಅನುಮತಿ ಇಲ್ಲದೆ ಗರ್ಭಗುಡಿಯೊಳಕ್ಕೆ ಪ್ರವೇಶಿಸಿದ್ದಾರೆ. ಇದು ಶಿಷ್ಟಾಚಾರಕ್ಕೆ ವಿರುದ್ದವಾಗಿದ್ದು, ಭಕ್ತರ ಭಾವನೆಯೊಂದಿಗೆ ಅವರು ಆಟವಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ವಿಷಯ ಸಂಬಂಧ ವರದಿ  ನೀಡುವಂತೆ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉಪ ವಿಭಾಗಾಧಿಕಾರಿಗೆ ಸೂಚಿಸಿದ್ದಾರೆ.
ಉಮಾ ಅವರು ಗರ್ಭಗುಡಿಯ ಲಕ್ಷ್ಮಿ ಮಂಟಪದವರೆಗೂ ಪ್ರವೇಶಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ, ಈ ಹಿಂದೆ ಉಮಾ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ್ದರು. 
ಸಂಪ್ರದಾಯವನ್ನು ಗಾಳಿಗೆ ತೂರಿರುವುದು ದುರದೃಷ್ಟಕರ. ಇದು ಧಾರ್ಮಿಕ ಶ್ರದ್ದಾ ಭಕ್ತಿಯ ಮೇಲೆ ಪರಿಣಾಮ ಬೀರಲಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ. 
ಉಮಾ ಅವರ ಒಳಪ್ರವೇಶವು ಕಟ್ಟುಪಾಡುಗಳಿಗೆ ವಿರುದ್ಧವಾಗಿದೆ. ನವರಾತ್ರಿ ವೇಳೆ ಸುಹಾಸಿನಿ ಪೂಜೆಯಲ್ಲಿ ಸುಹಾಸಿನಿಯರು ಧಾರ್ಮಿಕ ಕಾರ್ಯದಲ್ಲಿ  ಲ್ಗೊಂಡಿರುವಾಗ ಉಮಾ ಅವರು ಒಳಪ್ರವೇಶಿರುವುದು ಸಂಪ್ರದಾಯಕ್ಕೆ ವಿರುದ್ಧವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಪೋಕ್ಸೋ ಕೇಸ್​ ಆರೋಪಿಯ ಭೀಭತ್ಸ ಕೃತ್ಯ: ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ ಸಂತ್ರಸ್ತೆ ಸೇರಿ 6 ಮಂದಿಯ ಭೀಕರ ಹತ್ಯೆ!