ರಾಜ್ಯ

ಬಿಯರ್ ಪ್ರಿಯರಿಗೆ ಕಹಿ ಸುದ್ದಿ; ಬೆಂಗಳೂರಿನಲ್ಲಿ ಪೂರೈಕೆ ಕೊರತೆ

Sumana Upadhyaya

ಬೆಂಗಳೂರು: ನಗರದ ಬಿಯರ್ ಪ್ರಿಯರಿಗೆ ಕಹಿ ಸುದ್ದಿಯಿದೆ. ಬಿಯರ್ ಬೇಕೆಂದು ಮಳಿಗೆಗಳಿಗೆ ಹೋದರೆ ಹಲವೆಡೆ ಖಾಲಿಯಾಗಿದೆಯೆಂದು ಬರಿಗೈಯಲ್ಲಿ ಹಿಂತಿರುಗಬೇಕಾದ ಪರಿಸ್ಥಿತಿಯಿದೆ.

ಭಾರತದಲ್ಲಿ ತಯಾರಾಗುವ ಮದ್ಯಗಳ ಮಾರಾಟಕ್ಕೆ ರಾಜ್ಯ ಸರ್ಕಾರ ಹೆಚ್ಚು ಒತ್ತು ನೀಡುವುದು ಮದ್ಯ ಪೂರೈಕೆಯಲ್ಲಿ ಕೊರತೆಗೆ ಕಾರಣ ಎಂದು ನಗರದ ಮದ್ಯ ಮಾರಾಟ ಮಾಡುವ ಮಾಲೀಕರು ಹೇಳುತ್ತಾರೆ. ಭಾರತದಲ್ಲಿ ತಯಾರಿಸುವ ಲಿಕ್ಕರ್ ಮಾರಾಟದಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವುದರಿಂದ ಸರ್ಕಾರ ಅದಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ರೈತರ ಸಾಲ ಮನ್ನಾ ಮಾಡಿರುವುದರಿಂದ ಸರ್ಕಾರಕ್ಕೆ ಬೇರೆ ಮೂಲಗಳಿಂದ ಆದಾಯ ಹೆಚ್ಚಿಸುವುದು ಅನಿವಾರ್ಯವಾಗಿದೆ.

ಎಂಆರ್ ಪಿ ದರದಲ್ಲಿ ಬಿಯರ್ ಸಿಗುವ ಔಟ್ ಲೆಟ್ ಗಳಲ್ಲಿ ಬೀರ್ ಸಿಗುವುದು ಕಷ್ಟವಾಗಿದೆ. ಅನೇಕ ಬಿಯರ್ ಬ್ರಾಂಡ್ ಗಳು ಕಳೆದ 8-10 ದಿನಗಳಿಂದ ಸಿಗುತ್ತಿಲ್ಲ. ಲಿಕ್ಕರ್ ಡಿಪೊದಿಂದ ಸಾಕಷ್ಟು ಬಿಯರ್ ಗಳು ಸಿಗುತ್ತಿಲ್ಲ ಎಂದು ಮಳಿಗೆಗಳ ಮಾಲೀಕರು ಹೇಳುತ್ತಾರೆ ಎನ್ನುತ್ತಾರೆ ಇಂದಿರಾನಗರ ನಿವಾಸಿ ಕೆವಿನ್ ಮೆನೆಝಸ್.

ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಇದನ್ನು ಒಪ್ಪುವುದಿಲ್ಲ. ಸಾಲುಸಾಲು ರಜೆ ಬಂದಿರುವುದರಿಂದ ಖರೀದಿದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಬಿಯರ್ ಕೊರತೆಯುಂಟಾಗಿರಬಹುದು. ಸದ್ಯದಲ್ಲಿಯೇ ಪರಿಸ್ಥಿತಿ ಸಹಜ ಸ್ಥಿತಿಗೆ ಬರಲಿದೆ ಎಂದರು.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರಾಜ್ಯ ವೈನ್ ವ್ಯಾಪಾರಿಗಳ ಸಂಘಟನೆ ಪದಾಧಿಕಾರಿ, ಅಬಕಾರಿ ಡಿಪೊಗಳಿಂದ ಮಳಿಗೆಗಳಿಗೆ ಸಾಕಷ್ಟು ಮದ್ಯದ ಬಾಟಲಿಗಳು ಪೂರೈಕೆಯಾಗುತ್ತಿಲ್ಲ. ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲು ಲಿಕ್ಕರ್ ಗಳ ಮಾರಾಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ ಎನ್ನುತ್ತಾರೆ.

SCROLL FOR NEXT