ಸುನಾಮಿ ಕಿಟ್ಟಿ 
ರಾಜ್ಯ

ಬೆಂಗಳೂರು; ಸಿಗರೇಟ್ ಕೊಡದ್ದಕ್ಕೆ ಪಬ್'ನಲ್ಲಿ ಸುನಾಮಿ ಕಿಟ್ಟಿ ಗ್ಯಾಂಗ್ ಗಲಾಟೆ!

ತಮಗೆ ಬೇಕಾದ ಸಿಗರೇಟ್ ಬ್ಯ್ಯಾಂಡ್ ನೀಡಿದ ಕಾರಣಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಬಿಗ್ ಬಾಸ್ ಕ್ಯಾತಿಯ ಸುನಾಮಿ ಕಿಟ್ಟಿ ಹಾಗೂ ಆತನ ಸ್ನೇಹಿತ ಗೂಂಡಾವರ್ತನೆ ತೋರಿರುವ ಘಟನೆ ಮಲ್ಲೇಶ್ವರಂನ ಐ ಅಲ್ಟ್ರಾ ಲಾಂಜ್ ರೆಸ್ಟೋರೆಂಟ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ...

ಬೆಂಗಳೂರು: ತಮಗೆ ಬೇಕಾದ ಸಿಗರೇಟ್ ಬ್ಯ್ಯಾಂಡ್ ನೀಡಿದ ಕಾರಣಕ್ಕೆ ರೆಸ್ಟೋರೆಂಟ್ ಸಿಬ್ಬಂದಿ ಮೇಲೆ ಬಿಗ್ ಬಾಸ್ ಕ್ಯಾತಿಯ ಸುನಾಮಿ ಕಿಟ್ಟಿ ಹಾಗೂ ಆತನ ಸ್ನೇಹಿತ ಗೂಂಡಾವರ್ತನೆ ತೋರಿರುವ ಘಟನೆ ಮಲ್ಲೇಶ್ವರಂನ ಐ ಅಲ್ಟ್ರಾ ಲಾಂಜ್ ರೆಸ್ಟೋರೆಂಟ್ ನಲ್ಲಿ ಭಾನುವಾರ ರಾತ್ರಿ ನಡೆದಿದೆ. 
ಗುತ್ತಿಗೆದಾರ ಮಂಜುನಾಥ್ ಹಾಗೂ ಸುನಾಮಿ ಕಿಟ್ಟಿ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ಊಟಕ್ಕೆಂದು ರೆಸ್ಟೋರೆಂಟ್'ಗೆ ಹೋಗಿದ್ದಾರೆ. ಮದ್ಯ ಸೇವಿಸುತ್ತಿದ್ದ ಮಂಜುನಾಥ್ ಸಿಗರೇಟ್ ಕೊಡುವಂತೆ ರೆಸ್ಟೋರೆಂಟ್ ಸಿಬ್ಬಂದಿಯನ್ನು ಕೇಳಿದ್ದಾನೆ. ರೆಸ್ಟೋರೆಂಟ್ ಸಿಬ್ಬಂದಿ ಸಿಗರೇಟ್ ನೀಡಿದ ಬಳಿಕ ತಮಗೆ ಬೇಕಾದ ಬ್ರ್ಯಾಂಡ್ ಕೊಡುವಂತೆ ತಗಾದೆ ತೆಗೆದಿದ್ದಾನೆ. 
ಈ ವೇಳೆ ರೆಸ್ಟೋರೆಟ್ ಸಿಬ್ಬಂದಿ, ಸುನಾಮಿ ಕಿಟ್ಟಿ ಹಾಗೂ ಮಂಜುನಾಥ್ ನಡುವೆ ತೀವ್ರ ಮಾತಿನ ಚಕಮಕಿ ನಡೆದು ತಳ್ಳಾಟ ನಡೆದಿದೆ. 
ಸುನಾಮಿ ಕಿಟ್ಟಿ ಹಾಗೂ ಮಂಜುನಾಥ್ ರೆಸ್ಟೋರೆಂಟ್ ಸಿಬ್ಬಂದಿಯನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಕೂಗಾಟದ ಶಬ್ಧ ಕೇಳಿ ಸ್ತಳದಲ್ಲಿದ್ದ ಬೌನ್ಸರ್ ಗಳು ಸುನಾಮಿ ಕಿಟ್ಟಿ ಹಾಗೂ ಮಂಜುನಾಥ್ ಅವರನ್ನು ಹೊರಗೆ ಕಳುಹಿಸಿದ್ದಾರೆ. 
ಘಟನೆ ಬಳಿಕ ರೆಸ್ಟೋರೆಂಟ್ ಮಾಲೀಕರು ಪ್ರಕರಣ ದಾಖಲಿಸಿಲ್ಲ. ಆದರೆ, ವಿಡಿಯೋ ವೈರಲ್ ಆದ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ನಗರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿ ಸುನಾಮಿ ಕಿಟ್ಟಿ ಹಾಗೂ ಅವರ ಸ್ನೇಹಿತ ಮಂಜುನಾಥ್ ಅವರನ್ನು ಬಂಧಿಸಿ, ಬಳಿಕ ಎಚ್ಚರಿಕೆ ನೀಡಿ ಠಾಣಾ ಜಾಮೀನನ ಮೇಲೆ ಬಿಡುಗಡೆ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!