ಬೆಂಗಳೂರು: ಪ್ರತ್ಯೇಕ ಘಟನೆಯಲ್ಲಿ ಲೋಕಸಭಾ ಉಪಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಾಗಿಸಲಾಗುತ್ತಿದ್ದ ರೂ.35 ಲಕ್ಷವನ್ನು ವಶಪಡಿಸಿಕೊಂಡಿರುವ ಘಟನೆ ಬಳ್ಳಾರಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಶಿವಮೊಗ್ಗ ಸಮೀಪದ ಮಡಿಕೆ ಚೀಲೂರು ಚೆಕ್'ಪೋಸ್ಟ್ ನಲ್ಲಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ರೂ.30 ಲಕ್ಷಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಣ ಗುರುಪುರ ಬಡಾವಣೆ ನಿವಾಸಿ, ಅಡಕೆ ವರ್ತಕ ಶ್ರೀನಿವಾಸ್ ಅವರಿಗೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು, ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮದಲಗಟ್ಟಿ ಚೆಕ್ ಪೋಸ್ಟ್ ನಲ್ಲಿ ಸಾರಿಗೆ ಬಸ್ ನಲ್ಲಿ ಕೊಟ್ಟೂರು ಗ್ರಾಮದಲ್ಲಿ ಚಂದ್ರಪ್ಪ ನಾಗಪ್ಪ ಎಂಬುವವರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ.4.49 ಲಕ್ಷ ನಗದನ್ನು ಎಸ್ಐಟಿ ತಂಡ ವಶಪಡಿಸಿಕೊಂಡಿದೆ.