ಜಾಹೀರಾತು ಫಲಕ ತೆರವು ಬೇಡ: ಔಟ್ ಡೋರ್ ಅರ್ಡ್ವಟೈಸಿಂಗ್ ಅಸೋಸಿಯೇಷನ್ ಕಾರ್ಯಕರ್ತರಿಂದ ಪ್ರತಿಭಟನೆ
ಬೆಂಗಳೂರು: ಪಾಲಿಕೆ ವ್ಯಾಪ್ತಿಯ ಖಾಸಗಿ ಜಮೀನಿನಲ್ಲಿ ಅಳವಡಿಸಲಾಗಿರುವ ಅಧಿಕೃತವಾದ ಜಾಹೀರಾತು ಫಲಕಗಳನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿ ಪುರಭವನದ ಎದುರು ಔಟ್ ಡೋರ್ ಅರ್ಡ್ವಟೈಸಿಂಗ್ ಅಸೋಸಿಯೇಷನ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಸುಮಾರು 60 ವರ್ಷಗಳಿಂದಲೂ ಔಟ್ ಡೋರ್ ಅರ್ಡ್ವಟೈಸಿಂಗ್ ಉದ್ಯಮ ಅಸ್ತಿತ್ವದಲ್ಲಿದೆ. ಅಂದಾಜು 5 ಲಕ್ಷ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಉದ್ಯಮವನ್ನು ಅವಲಂಬಿಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ನ್ಯಾಯಾಲಯದ ಆದೇಶ ಎಂದು ತಪ್ಪು ಮಾಹಿತಿ ನೀಡಿ ರಾತ್ರೋರಾತ್ರಿ ಜಾಹೀರಾತು ಫಲಕಗಳನ್ನು ತೆರವುಗೊಳಿಸುತ್ತಿದ್ದಾರೆ. ಇದರಿಂದ ಇದೇ ಉದ್ಯಮವನ್ನು ನಂಬಿಕೊಂಡಿದ್ದ ಹಲವು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಎಂ. ಜಾವೇದ್ ಅವರು ಮಾತನಾಡಿ, ಅಧಿಕೃತ ಜಾಹೀರಾತು ಫಲಕಗಳನ್ನು ತೆರವು ಮಾಡಬಾರದು. ವರ್ಷಕ್ಕೆ ಸುಮಾರು ರೂ.500 ಕೋಟಿ ವಹಿವಾಟು ನಡೆಸುವ ಈ ಉದ್ಯಮದಿಂದ ಸರ್ಕಾರಕ್ಕೆ ಸುಮಾರು ರೂ.100 ಕೋಟಿ ತೆರಿಗೆ ಸಂಗ್ರಹವಾಗುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics