ಬೆಂಗಳುರು: ಸೈಬರ್ ಕ್ರೈಮ್ ಇಲಾಖೆ ಆನ್ಲೈನ್ ವಂಚನೆ ಕುರಿತು ಸಾಕಷ್ಟು ಅರಿವು ಮೂಡಿಸಿದ್ದರೂ ಮತ್ತೆ ಮತ್ತೆ ಜನರು ಮೋಸಗೊಳ್ಳುತ್ತಲೇ ಇದ್ದಾರೆ.
ಇದೀಗ ಆನ್ಲೈನ್ ಮೂಲಕ ನಕಲಿ ಉದ್ಯೋಗದ ಭರವಸೆ ನಿಡುವ ಬೆಂಗಳೂರಿನ ಕೋರಮಂಗಲದಲ್ಲಿರುವ ಐಟಿ ಸಂಸ್ಥೆಯೊಂದರ ಮಾಲೀಕನನ್ನು ಪೋಲೀಸರು ವಶಕ್ಕೆ ಪಡಿದಿದ್ದಾರೆ. ಮರ್ಜರ್ ಟೆಕ್ನಾಲಜಿ ಎಂಬ ಹೆಸರಿನ ಐಟಿ ಸಂಸ್ಥೆಯೊಂದರ ಮಾಲೀಕ ದಬಾಶಿಯಸ್ ರಾಯ್, ನನ್ನು ಕೋರಮಂಗಲ ಪೋಲೀಸರು ಬಂಧಿಸಿದ್ದಾರೆ.
ಈತ ಅಬಾಸ್ ಎನ್ನುವ ಇನ್ನೊಂದು ಹೆಸರಿನಲ್ಲಿ ಇಂಜಿನಿಯರಿಂಗ್ ಪೂರೈಸಿದ ವಿದ್ಯಾರ್ಥಿಗಳಿಗೆ ತನ್ನ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 50,000 ರಿಂದ 2 ಲಕ್ಷ ರೂ. ಹಣ ಪಡೆಯುತ್ತಿದ್ದ. ಸುಮಾರು 50 ಇಂಜಿನಿಯರಿಂಗ್ ಪದವೀಧರರಿಗೆಈತ ಹಣ ಪಡೆದು ನಕಲಿ ಆಫರ್ ಲೆಟರ್ ನೀಡಿದ್ದನು ಎಂದು ಪೋಲೀಸರು ಹೇಳಿದ್ದಾರೆ.
ಅಸಲಿಗೆ ಕಳೆದ ವರ್ಷ ಫೆಬ್ರವರಿಯಲ್ಲಿ ಸ್ಥಾಪನೆಯಾಗಿದ್ದ ಸಂಸ್ಥೆಯು ಈ ವರ್ಷ ಸಪ್ಟೆಂಬರ್ ಗೆ ಮುಚ್ಚಿ ಹೋಗಿದೆ. ಕೋರಮಂಗಲದ 80 ಅಡಿ ರಸ್ತೆಯಲ್ಲಿ ಈ ವಂಚಕ ಸಂಸ್ಥೆಯನ್ನು ನಡೆಸುತ್ತಿದ್ದನು.ಮಾಹಿತಿ ತಂತ್ರಜ್ಞಾನ ನೌಕರರ ಒಕ್ಕೂಟದ ಅಧ್ಯಕ್ಷರಾದ ಎಸಿ ಕುಮಾರಸ್ವಾಮಿ ಈತನ ಸಂಬಂಧ ಕೋರಮಂಗಲ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಕೆ.ಆರ್ ಪುರಂನ ನಿವಾಸಿಯಾಗಿದ್ದ ದಬಾಶಿಯಸ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. "ಹಗರಣದಲ್ಲಿ ಅವರ ತಾಯಿ, ಪತ್ನಿ, ಸಹೋದರ ಮತ್ತು ಇತರರಿದ್ದಾರೆ" ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
"ಅಪರಾಧಿಯು ತಾನು ಪದವೀಧರರಿಂದ ಸಂಗ್ರಹಿಸಿದ್ದ ಹಣವನ್ನು ಸ್ವಂತ ಖರ್ಚಿಗೆ ಬಳಸಿಕೊಳ್ಳುತ್ತಿದ್ದ. ತನಿಖೆ ನಡೆಯುತ್ತಿದ್ದು ಆತನಿಂದ ಇನ್ನಷ್ಟು ವಿವರ ಪಡೆಯಬೇಕಿದೆ.ಸಧ್ಯ ಆರೋಪಿಯನ್ನು ಜೈಲಿನಲ್ಲಿಡಲಾಗಿದೆ"ಕೋರಮಂಗಲ ಪೊಲೀಸ್ ಠಾಣೆಯ ಪೋಲೀಸ್ ಅಧಿಕಾರಿ ವಿವರಿಸಿದ್ದಾರೆ.
ಚೆನ್ನೈ, ಹೈದರಾಬಾದ್ ಮತ್ತು ದೆಹಲಿ ಮುಂತಾದ ಇತರ ನಗರಗಳಲ್ಲಿಯೂ ಸಹ ನಕಲಿ ಉದ್ಯೋಗ ಭರವಸೆಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ.ಇಂತಹಾ ವಂಚಕರು ನಕಲಿ ಐಡಿ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಗಳನ್ನು ಬಳಸುತ್ತಾರೆ. ನೋಯಿಡಾದಲ್ಲಿ ಈ ಮರ್ಜರ್ ಟೆಕ್ನಾಲಜಿ ಸಂಸ್ಥೆ ನೊಂದಣಿಯಾಗಿದೆ.ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ದೂರಿನಲ್ಲಿ ಒಟ್ಟು 47 ಜನರ ಹೆಸರಿದ್ದು ಅವರೆಲ್ಲಾ ವಂಚನೆ ಮೂಲಕ ಪಡೆದ ಹಣದ ವಿವರವೂ ಸಹ ದಾಖಲಾಗಿದೆ.