ಬೆಂಗಳೂರು: ಪ್ರಧಾನಿ ಮೋದಿ ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದ ಮೇಲೆ ಕುಳಿತ ಚೇಳಿನಂತಿದ್ದಾರೆ. ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಿತಿಯನ್ನು ಮೀರಿದ್ದಾರೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದಾರೆ.
ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಪುಸ್ತಕವೊಂದರ ಸಾಲನ್ನು ಉಲ್ಲೇಖಿಸಿ ಮಾತನಾಡಿದ ಶಶಿ ತರುರ್ "ಮೋದಿಯವರ ವ್ಯಕ್ತಿತ್ವದ ಬೆಳವಣಿಗೆಯ ರೀತಿ ಕಂಡು ಆರ್ ಎಸ್ ಎಸ್ ಗೆ ನಿರಾಸೆಯಾಗಿದೆ. ಅವರು ಆರ್ ಎಸ್ ಎಸ್ ಪಾಲಿಗೆ ಶಿವಲಿಂಗದಲ್ಲಿ ಕುಳಿತಿರುವ ಒಂದು ಚೇಳಿನಂತೆ. ನೀವು ಅದನ್ನು ನಿಮ್ಮ ಕೈಯಿಂದ ತೆಗೆದು ಹಾಕಲು ಆಗಲ್ಲ, ಚಪ್ಪಲಿಯಿಂದ ಹೊಡೆಯುವುದಕ್ಕಾಗಲಿ ಬರುವುದಿಲ್ಲ" ಮೋದಿ ಹಾಗೂ ಆರ್ ಎಸ್ ಎಸ್ ನಡುವಿನ ಸಂಬಂಧದ ಕುರಿತು ತರೂರ್ ವಿಶ್ಲೇಷಣೆ ಮಾಡಿದ್ದಾರೆ.
ಬೆಂಗಳೂರಿನ ಸಾಹಿತ್ಯ ಉತ್ಸವದಲ್ಲಿ ' ಭಾನುವಾರ ತಮ್ಮ ಪುಸ್ತಕ 'The Paradoxical Prime Minister" ದ ಕುರಿತು ಮಾತನಾಡಿದ ಅವರು, "ಇಂದು ಮೋದಿ ಹಾಗೂ ಹಿಂದುತ್ವ ಸೇರಿ ಆಗಿರುವ ಮೋದಿತ್ವವು ಆರ್ ಎಸ್ ಎಸ್ ಗಿಂತ ಹೆಚ್ಚು ಎತ್ತರದಲ್ಲಿ ಬೆಳೆದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕೇಂದ್ರ ಸರ್ಕಾರದ ವಿರುದ್ಧ ಟೀಕೆ ನಡೆಸಿದ ತರೂರ್ ಕೇಂದ್ರ ಸರ್ಕಾರದ ಕೇಂದ್ರೀಕೃತ ಉನ್ನತ ಅಧಿಕಾರದಿಂದಾಗಿ ಅಧಿಕಾರಷಾಹಿ ವರ್ಗ ಪ್ರಧಾನಿ ಕಛೇರಿ ಮುಂದೆ ಕಾದು ನಿಲ್ಲಬೇಕಾಗಿದೆ.ಈ ಕಾರಣದಿಂದಲೇ ಗೃಹ ಸಚಿವರಿಗೆ ಸಿಬಿಐಅನಲ್ಲಿನ ಬದಲಾವಣೆಯ ಅರಿವಿಲ್ಲ, ವಿದೇಶಾಂಗ ಮಂತ್ರಿಗಳಿಗೆ ವಿದೇಶಾಂಗ ನೀತಿಯಲ್ಲಿನ ಬದಲಾವಣೆಯ ಕುರಿತು ಅರಿವಾಗಿಲ್ಲ.ರಕ್ಷಣಾ ಸಚಿವರಿಗೆ ಕಡೆ ಕ್ಷಣದವರೆಗೂ ರಾಫೆಲ್ ಒಪ್ಪಂದದಲ್ಲಾಗಿದ್ದ ಬದಲಾವಣೆ ಕುರಿತು ಮಾಹಿತಿ ಇರಲಿಲ್ಲ. ಎಂದು ತರೂರ್ ಹೇಳಿದ್ದಾರೆ.