ಸ್ಪೀಕರ್ ಬಾಕ್ಸ್'ನಲ್ಲಿ ಸಾಗಿಸುತ್ತಿದ್ದ ರೂ.3.4 ಕೋಟಿ ಮೌಲ್ಯದ 10.63 ಕೆಜಿ ಚಿನ್ನದ ಬಿಸ್ಕೆಟ್ ವಶ!
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು, ಕಳ್ಳ ಹಾದಿಯಲ್ಲಿ ಬರುತ್ತಿದ್ದ ರೂ.3.40 ಕೋಟಿ ಮೌಲ್ಯದ 10.36 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಮೂಲಕ ಪ್ರಸ್ತಕ್ತ ವರ್ಷದಲ್ಲಿ ಬಹುದೊಡ್ಡ ಬೇಟೆಯಾಗಿದೆ.
ಸಿಂಗಾಪುರ ಮೂಲಗ ನೂರಲೇನ್ ಎಂಬಾಕೆಯಿಂದ ರೂ.3.02 ಕೋಟಿ ಮೊಲ್ಯದ 9.2 ಕೆಜಿ ಚಿನ್ನದ ಬಿಸ್ಕೆಟ್ ವಶಪಡಿಸಿಕೊಳ್ಳಲಾಗಿದ್ದು, ಆಕೆ ನಾಪತ್ತೆಯಾಗಿದ್ದಾಳೆ
ಅ.28 ರ ರಾತ್ರಿ 9.30ರಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿಸುವಾಗ ಸೂಟ್'ಕೇಸ್ ವೊಂದರ ಮೇಲೆ ಅನುಮಾನ ಬಂದಿತ್ತು. ಕೂಡಲೇ ಅದನ್ನು ಎಱಡು ಬಾರಿ ಲೋಹ ಪರಿಶೋಧಕದಲ್ಲಿ ತಪಾಸಣೆ ನಡೆಸಲಾಯಿತು.
ಈ ವೇಳೆ ಅದರಲ್ಲಿ ಅಡಗಿಸಿಟ್ಟಿದ್ದ ಸ್ಪೀಕರ್ ಬಾಕ್ಸ್ ಅನ್ನು ತೆರೆದು ನೋಡಿದಾಗ ಅದರಲ್ಲಿ ರೂ.3.02 ಕೋಟಿ ಮೌಲ್ಯದ 9.2 ಕೆಜಿ ಚಿನ್ನದ ಬಿಸ್ಕೆಟ್ ಗಳು ಪತ್ತೆಯಾದವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಇತ್ತ ಸೂಟ್ ಕೇಸ್ ಕಸ್ಟಮ್ಸ್ ಅಧಿಕಾರಿಗಳ ಸುಪರ್ದಿಗೆ ಸೇರಿದ ಕೂಲಡೇ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಬಳಿಕ ಬ್ಯಾಗ್ ಮೇಲಿದ್ದ ಟ್ಯಾಗ್ ಆಧಾರದ ಮೇಲೆ ಆಕೆಯ ಗುರುತು ಪತ್ತೆ ಹಚ್ಚಲಾಗಿದೆ.
ಈ ವರ್ಷದಲ್ಲಿ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಅತೀ ದೊಡ್ಡ ಚಿನ್ನ ಕಳ್ಳ ಸಾಗಾಣೆ ಪ್ರಕರಣ ಇದಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಹರಾನ್ ನಿಂದ ಕಾನೂನು ಬಾಹಿರವಾಗಿ ಚಿನ್ನ ಸಾಗಾಣಿಕೆ ಯತ್ನಿಸಿದ್ದ ಮತ್ತೆ ನಾಲ್ವರು ಕಸ್ಟಮಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದು, ಆರೋಪಿಗಳಿಂದ 1.16 ಕೆಜಿ ಚಿನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ.
ತಮಿಳುನಾಡಿನ ಅಲಿ, ಅಬ್ದುಲ್ ಖದೀರ್, ನಗೂರ್ ಮೆವನ್, ಸತ್ತೀಕ್ ಮತ್ತು ಸಾಹುಬ್ ಅಹ್ಮದ್ ಬಂಧಿತ ಆರೋಪಿಗಳು.
ಭಾನುವಾರ ರಾತ್ರಿ ವಿದೇಶದಿಂದ ಆಗಮಿಸಿದಾಗ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಈ ತಂಡವು ಬಟ್ಟೆಯಲ್ಲಿ ಅಡಗಿಸಿಟ್ಟು ಚಿನ್ನ ಸಾಗಿಸಲು ಯತ್ನಿಸಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.