ಮಂಗಳೂರು: ಚಲಿಸುವ ಬಸ್'ಗಳಿಗೆ ಕಿ.ಮೀಗಟ್ಟಲೆ ದಾರಿ ಬಿಡದ ಕೆಲವು ವಾಹನ ಚಾಲಕರು ಸತಾಯಿಸಿರುವ ಘಟನೆಗಳು ನೋಡಿದ್ದೇವೆ, ಆದರೆ, ಇಲ್ಲೊಬ್ಬ ಆಸಾಮಿ ಆ್ಯಂಬುಲೆನ್ಸ್'ಗೆ ದಾರಿ ಬಿಡದೆ ಅಮಾನವೀಯ ವರ್ತನೆಯನ್ನು ತೋರಿಸಿದ್ದಾನೆ.
ರೋಗಿಯೊಬ್ಬರನ್ನೂ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ವೊಂದು ಬಿಸಿ ರಸ್ತೆಯಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೋಗಿಯೊಬ್ಬರನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ವೊಂದು ವೇಗವಾಗಿ ಸಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ಟ್ಯಾಕ್ಸಿ ಕೆಎ17ಎಸಿ2847ಯೊಂದನ್ನು ಓವರ್ ಟೇಕ್ ಮಾಡಲು ಚಾಲಕ ಮುಂದಾಗಿದ್ದಾನೆ. ಆ್ಯಂಬುಲೆನ್ಸ್ ಶಬ್ಧ ಮಾಡಿದ್ದರೂ ಕ್ಯಾಬ್ ಚಾಲಕ ದಾರಿ ಮಾಡಿಕೊಟ್ಟಿಲ್ಲ. ಪದೇ ಪದೇ ಆ್ಯಂಬುಲೆನ್ಸ್ ದಾರಿ ಮಾಡಿಕೊಡದೆ ದರ್ಪ ತೋರಿದ್ದಾನೆ. ಸುಮಾರು 10 ಕಿ.ಮೀವರೆಗೆ ದಾರಿ ಬಿಡದೆ ಸತಾಯಿಸಿದ್ದಾನೆ. ಘಟನೆಯ ವಿಡಿಯೋವನ್ನು ಆ್ಯಂಬುಲೆನ್ಸ್ ಚಾಲಕ ವಿಡಿಯೋ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಇದೀಗ ಚಾಲಕನನ್ನು ಗುರ್ತಿಸಿದ್ದು, ಚಾಲಕ ಸೂರತ್ಕಲ್ ನಲ್ಲಿರುವುದಾಗಿ ತಿಳಿದುಬಂದಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics