ಪ್ರವಾಹಕ್ಕೆ ನಲುಗಿದ ಕೊಡಗಿನಲ್ಲಿ ರೆಸಾರ್ಟ್'ಗಳು ಬಂದ್: ಮೈಸೂರು, ಚಾಮರಾಜನಗರದತ್ತ ಮುಖ ಮಾಡಿದ ಪ್ರವಾಸಿಗರು
ಪ್ರವಾಸಿಗರನ್ನು ಸದಾಕಾಲ ಕೈಬೀಸಿ ಕರೆಯುತ್ತಿದ್ದ ಕೊಡಗು ಜಿಲ್ಲೆ ಸಾವಿನ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ರೆಸಾರ್ಟ್ ಗಳನ್ನು ಬಂದ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರತ್ತ ಪ್ರವಾಸಿಗರು...
ಮೈಸೂರು: ಪ್ರವಾಸಿಗರನ್ನು ಸದಾಕಾಲ ಕೈಬೀಸಿ ಕರೆಯುತ್ತಿದ್ದ ಕೊಡಗು ಜಿಲ್ಲೆ ಸಾವಿನ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿ ಹೋಗಿದ್ದು, ರೆಸಾರ್ಟ್ ಗಳನ್ನು ಬಂದ್ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಮೈಸೂರು ಹಾಗೂ ಚಾಮರಾಜನಗರತ್ತ ಪ್ರವಾಸಿಗರು ಮುಖ ಮಾಡಿದ್ದು, ಇದೀಗ ಮೈಸೂರು ಹಾಗೂ ಚಾಮರಾಜನಗರದಲ್ಲಿರುವ ರೆಸಾರ್ಟ್, ಕಾಟೇಜ್ ಗಳಿಗೆ ಡಿಮ್ಯಾಂಡ್ ಗಳು ಹೆಚ್ಚಾಗಿವೆ.
ವಾರಾಂತ್ಯದಿನ ನಗಳಲ್ಲಿ 7,000 ಜನರು ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದರು. ಕೊಡಗು ಜಿಲ್ಲೆಗೆ ಭೇಟಿ ನೀಡುತ್ತಿದ್ದಪ್ರವಾಸಿಗರು ಇದೀಗ ಶ್ರೀರಂಗಪಟ್ಟಣ, ಬಂಡೀಪುರ, ಕೆ.ಗುಡಿ, ಹೆಚ್.ಡಿ.ಕೋಟೆ, ಬರಚುಕ್ಕಿ ಬಳಿ ಬರುವ ಮದ್ಯರಂಗ ಸೇರಿದಂತೆ ಇತರೆ ಕ್ಷೇತ್ರಗಳ ಕುರಿತಂತೆ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಬಳಿ ಮಾಹಿತಿಗಳನ್ನು ಪಡೆಯುತ್ತಿದ್ದಾರೆ.
ಪ್ರವಾಸಿಗರು ಮೈಸೂರು ಹಾಗೂ ಚಾಮರಾಜನಗರದತ್ತ ಮುಖ ಮಾಡಿರುವ ಹಿನ್ನಲೆಯಲ್ಲಿ ಇಲ್ಲಿನ ರೆಸಾರ್ಟ್ ಹಾಗೂ ಕಾಟೇಜ್ ಗಳ ಬೆಲೆಗಳು ಕೂಡ ದುಬಾರಿಯಾಗಿವೆ. ತಲಕಾಡಿನ ಕಾವೇರಿ ಬಳಿಯಿರುವ ರೆಸಾರ್ಟ್ ಗಳಲ್ಲಿ ಒಬ್ಬ ವ್ಯಕ್ತಿ ತಂಗಲು ರೂ.4,500 ಪಡೆಯಲಾಗುತ್ತಿದೆ. ಕಬಿನಿ ಬಳಿ ಒಂದು ರಾತ್ರಿ ಕಳೆಯಲು ರೂ.16,000 ಪಡೆದುಕೊಳ್ಳಲಾಗಿದೆ.
ಪ್ರವಾಹ ಹಿನ್ನಲೆಯಲ್ಲಿ ಕೆಲವೆಡೆ ಭೂಕುಸಿತ ಉಂಟಾದ ಹಿನ್ನಲೆಯಲ್ಲಿ ವಯಾನಾಡ್ ರೆಸಾರ್ಟ್ ಬಂದ್ ಮಾಡಲಾಗಿದೆ. ಹೀಗಾಗಿ ವಾರಾಂತ್ಯಗಳಲ್ಲಿ ಬರುವ ಪ್ರವಾಸಿಗರು ಯಲಂದೂರ್ ತಾಲೂಕಿನ ಬಿಆರ್. ಹಿಲ್ಸ್, ಗುಂಡ್ಲೇಪೇಟೆ ಬಜೆಟ್ ಹೋಟೆಲ್ ಗಳು ಹಾಗೂ ಚಾಮರಾಜನಗರದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ.