ರಾಜ್ಯ

ಸಿಎಂ ಭೇಟಿ ಮಾಡಿದ ಟೆಕ್ಕಿ: 24 ಗಂಟೆಗಳಲ್ಲೇ ಸಮಸ್ಯೆ ಬಗೆಹರಿಸಿದ ಪೊಲೀಸರು!

Shilpa D
ಬೆಂಗಳೂರು: ಜನತಾದರ್ಶನದಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರನ್ನು ಮಹಿಳಾ ಟೆಕ್ಕಿಯೊಬ್ಬರು ಭೇಟಿ ಮಾಡಿದ 24 ಗಂಟೆಗಳಲ್ಲೆ ಎಚ್ ಎ ಎಲ್ ಪೊಲೀಸರು ಅವರ ಸಮಸ್ಯೆ ಬಗೆಹರಿಸಿದ್ದಾರೆ. 
ಶನಿವಾರ ನಡೆದ ಮುಖ್ಯಮಂತ್ರಿಯವರ ಜನತಾದರ್ಶನದಲ್ಲಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಂದನಾ ಎಂಬುವರು ವಿಕೆಸಿ ಬಿಲ್ಡರ್‌ ಎಂಬ ಸಂಸ್ಥೆಗೆ 65 ಲಕ್ಷ ರೂ. ಪಾವತಿಸಿ ಫ್ಲಾಟ್‌ ಬುಕ್‌ ಮಾಡಿದ್ದರು. ಆಗಸ್ಟ್ 28 ರಂದು ಫ್ಲ್ಯಾಟ್ ನೀಡುವುದಾಗಿ ಬಿಲ್ಡರ್ಸ್ ಮಾಲೀಕರು ಹೇಳಿದ್ದರು, ಆದರೆ ಅದಾದ ನಂತರವೂ ನೋಂದಣಿ ಮಾಡಿಸದ ಕಾರಣ ಬೇಸತ್ತ ಮಹಿಳಾ ಟೆಕ್ಕಿ ಶನಿವಾರ ಜನತಾ ದರ್ಶನದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಅಳಲು ತೋಡಿಕೊಂಡಿದ್ದರು. 
ತಕ್ಷಣವೇ ಪೊಲೀಸ್‌ ಅಧಿಕಾರಿಗಳಿಗೆ ಕರೆ ಮಾಡಿ ಬಿಲ್ಡರ್‌ಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮುಖ್ಯಮಂತ್ರಿ  ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದರು. 
ಮಾರತ್ ಹಳ್ಳಿ ಪೊಲೀಸರು ವಿಕೆಸಿ ಬಿಲ್ಡರ್ಸ್ ವಿರುದ್ಧ ವಂಚನೆ ದೂರು ದಾಖಲಿಸಿದ್ದರು. ನಂತರ ಠಾಣೆಗೆ ಕರೆಸಿ  ಮಹಿಳೆಗೆ ಫ್ಲ್ಯಾಟ್ ರಿಜಿಸ್ಚಾರ್ ಮಾಡಿಸುವಂತೆ ಎಚ್ಚರಿಕೆ ನೀಡಿದ್ದರು. ಸೋಮವಾರ  ವಂದನಾ ಹೆಸರಿಗೆ ರಿಜಿಸ್ಟ್ರಾರ್ ಮಾಡಿಸಿದ್ದಾರೆ.
SCROLL FOR NEXT