ನಟ ಪ್ರಕಾಶ್ ರೈ 
ರಾಜ್ಯ

ವಿಚಾರವಾದಿಗಳ ಹತ್ಯೆ ವಿಚಾರದಲ್ಲಿ ಮೋದಿ ಮೌನದ ಹಿಂದೆ ರಾಕ್ಷಸ ಅಡಗಿದ್ದಾನೆ: ಪ್ರಕಾಶ್ ರೈ

ವಿಚಾರವಾದಿಗಳು ಮತ್ತು ಪ್ರಗತಿಪರರ ಹತ್ಯೆ ವಿಚಾರದಲ್ಲಿ ಪ್ರಧಾನಿ ಮೋದಿ ಮೌನದ ಹಿಂದೆ ಒಬ್ಬ ರಾಕ್ಷಸ ಅಡಗಿದ್ದಾನೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.

ಬೆಂಗಳೂರು: ವಿಚಾರವಾದಿಗಳು ಮತ್ತು ಪ್ರಗತಿಪರರ ಹತ್ಯೆ ವಿಚಾರದಲ್ಲಿ ಪ್ರಧಾನಿ ಮೋದಿ ಮೌನದ ಹಿಂದೆ ಒಬ್ಬ ರಾಕ್ಷಸ ಅಡಗಿದ್ದಾನೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಅವರ ಪುಣ್ಯತಿಥಿಯ ನಿಮಿತ್ತ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಕಾಶ್ ರೈ, ವಿಚಾರವಾದಿಗಳು, ಪ್ರಗತಿ ಪರರ ಹತ್ಯೆ ವಿಚಾರದಲ್ಲಿ ಪ್ರಧಾನಿ ಮೋದಿ ಮೌನವಾಗಿದ್ದಾರೆ. ಆದರೆ ಅವರ ಮೌನದ ಹಿಂದೆ ಓರ್ವ ರಾಕ್ಷಸ ಅಡಗಿದ್ದಾನೆ. ಪ್ರಗತಿಪರರ ಬಾಯಿ ಮುಚ್ಚಿಸಲು ಬೇಕಂತಲೇ ಕೇಸುಗಳನ್ನು ಹಾಕಲಾಗುತ್ತಿದೆ. ಪ್ರಧಾನಿ ಮೋದಿ ಕೊಲೆಗಳನ್ನು ಮಾಡಬಾರದು ಎಂದು ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಅವರ ಹೇಳಿಕೆಗಳು ಯಾವ ರೀತಿ ಇರುತ್ತವೆ ಅಂದರೆ ಸಿನಿಮಾದಲ್ಲಿ ಸಿಗರೇಟ್ ಸೇದುವ ದೃಶ್ಯಾವಳಿಗಳಲ್ಲಿ ಬರೆದಿರುವ 'ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎನ್ನುವ ರೀತಿಯಲ್ಲಿ ಇರುತ್ತವೆ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೇ ಕೆಲವು ಹಿಂದೂಪರ ಸಂಘಟನೆಗಳು ಹಿಂದೂಗಳನ್ನು ಬಲಿಪಶುಗಳನ್ನಾಗಿ ಮಾಡಿವೆ ಎಂದು ಪ್ರಕಾಶ್ ರೈ ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನದಲ್ಲಿ ಒಳ ಸಂಚಿರಲಿಲ್ಲ
ಇದೇ ವೇಳೆ ದಾಬೋಲ್ಕರ್ ಮತ್ತು ಪನ್ಸಾರೆ ಹತ್ಯೆ ಕುರಿತು ಮಾತನಾಡಿದ ಪ್ರಕಾಶ್ ರೈ, 'ಈ ಮೊದಲು ಪ್ರಗತಿಪರರ ಹತ್ಯೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನವಹಿಸಿದ್ದರು. ಆದರೆ ಅವರ ಮೌನದಲ್ಲಿ ಒಳಸಂಚಿರಲಿಲ್ಲ. ಆದರೆ ಈಗಿರುವ ಪ್ರಧಾನಿಗಳು ಕೂಡ ಸಹ ಮೌನವಹಿಸಿದ್ದಾರೆ. ಆದರೆ ಅವರ ಮೌನದಲ್ಲಿ ರಾಕ್ಷಸ ಅಡಗಿದ್ದಾನೆ. ಹೀಗಾಗಿ ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು. ಮೈಮರೆಯುವುದು ಬೇಡ. ಅಲ್ಲದೇ ಇವುಗಳನ್ನು ನಾವುಗಳು ಜನಸಾಮಾನ್ಯರಿಗೆ ತೋರಿಸಬೇಕಾಗಿದೆ ಎಂದು ರೈ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಭಟನಾನಿರತ ವಿದ್ಯಾರ್ಥಿ ವಿರುದ್ಧ ಪೆಲೆಟ್ ಗನ್ ಬಳಕೆ ವಿವಾದ; ಸಿಬ್ಬಂದಿಗಳ ಬೆನ್ನಿಗೆ ನಿಂತ CRPF ಮುಖ್ಯಸ್ಥ; ‘ನಿರ್ಭಯದಿಂದ ಕರ್ತವ್ಯ ನಿರ್ವಹಿಸುವಂತೆ ಸೂಚನೆ..!

Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ, ತೈಲ ಬೆಲೆ ಭಾರೀ ಏರಿಕೆ..!

ಎಫ್‌ಡಿಐ ಸೆಳೆಯುವಲ್ಲಿ ಕೇರಳ ಹಿನ್ನಡೆ: ದಕ್ಷಿಣದ ಇತರೆ ರಾಜ್ಯಗಳು ದಾಪುಗಾಲು, ರಾಷ್ಟ್ರೀಯ ಪಾಲು ಶೇ. 1ಕ್ಕಿಂತ ಕಡಿಮೆ

ಅಧಿವೇಶನಕ್ಕೂ ಮುನ್ನ ಬಸವರಾಜ್ ಹೊರಟ್ಟಿಗೆ ಸರ್ಕಾರ ಶಾಕ್: ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ, ಸಂಘರ್ಷ ಫಿಕ್ಸ್..!

ಪಕ್ಷಾಂತರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್: DCC ಅಧ್ಯಕ್ಷರ ನೇಮಕಕ್ಕೆ ಹೊಸ ತಂತ್ರ, ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಫುಲ್ ಕಂಟ್ರೋಲ್...!