ಮಡಿಕೇರಿ: ಪ್ರತಿವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯುತ್ತಿದ್ದ ವಾರ್ಷಿಕ ಕೊಡವ ಹಾಕಿ ಉತ್ಸವವು 2019ರಲ್ಲಿ ನಡೆಯುವುದಿಲ್ಲ. ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯ ಕಾರಣ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಈ ಕಾರಣದಿಂದ ತಿಂಗಳ ಕಾಲ ನಡೆಯಲಿದ್ದ ಹಾಕಿ ಉತ್ಸವವನ್ನು ರದ್ದು ಮಾಡಲಾಗಿದೆ ಎಂದು ಪಂದ್ಯಾವಳಿ ಆಯೋಜಕ ಮುಕ್ಕತಿರಾ ಕುಟುಂಬ ಮೂಲಗಳು ಹೇಳಿದೆ.
ಕೊಡವ ಹಾಕಿ ಅಕಾಡೆಮಿ, ಮುಕ್ಕತಿರಾ ಕುಟುಂಬಗಳು ಸೇರಿ ಈ ನಿರ್ಧಾರಕ್ಕೆ ಬಂದಿದ್ದು ಹಾಕಿ ಉತ್ಸವ ಆಯೋಜಕರಲ್ಲಿ ಒಬ್ಬರಾದ ಮುಕ್ಕರ್ತಿರಾ ಶಿವ ಮಾದಪ್ಪ "ಮುಂದಿನ ವರ್ಷ ಹಾಕಿ ಉತ್ಸವವಿರುವುದಿಲ್ಲ" ಎಂದಿದ್ದಾರೆ.
ಲಕ್ಷಗಟ್ಟಲೆ ರೂ. ವ್ಯಯಿಸಿ ಪ್ರತಿ ವರ್ಷ ಹಾಕಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು.ಆದರೆ ಈ ವರ್ಷ ಈ ಉತ್ಸವ ನಡೆಯುವುದಿಲ್ಲ. ಹಾಗೆಯೇ 2020ರಲ್ಲಿ ಉತ್ಸವ ನಡೆಸುವುದಾಗಿಯೂ ಮುಕ್ಕತಿರಾ ಕುಟುಂಬ ಹೇಳಿಕೆ ನೀಡಿದೆ.
ಕೊಡಗು ನೆರೆ ಪರಿಹಾರಕ್ಕಾಗಿ ತಮ್ಮ ಕೊಡುಗೆ ನಿಡುವಿರೆ ಎಂದು ಕೇಳಿದಾಗ "ಈ ಕುರಿತು ನಾವು ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ" ಮುಕ್ಕತಿರಾ ಶಿವ ಮಾದಪ್ಪ ಹೇಳಿದ್ದಾರೆ.
ಕೊಡಗು ಇದುವರೆಗೆ ಹಲವು ಉತ್ತಮ ಹಾಕಿ ಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ನಿಡಿದೆ. ಕೊಡವ ಸಮುದಾಯದ ಜನರು ತಾವು ಬೇರೆ ಬೇರೆ ಪ್ರದೇಶದಲ್ಲಿ ಕೆಲಸ ಮಾಡುವವರಾಗಿದ್ದರೂ ಹಾಕಿ ಉತ್ಸವ ಕಾರ್ಯಕ್ರಮದಲ್ಲಿ ತಪ್ಪದೆ ಸೇರುತ್ತಿದ್ದು ತಮ್ಮ ತಂಡದ ಗೆಲುವಿಗೆ ಬೆಂಬಲವಾಗಿ ನಿಲ್ಲುತ್ತಿದ್ದರು. ಪ್ರತೀ ವರ್ಷ ಒಂದು ಕೊಡವ ಕುಟುಂಬ ಈ ಕಾರ್ಯಕ್ರಮ ಆಯೋಜನೆಯ ಹೊಣೆ ಹೊರುತ್ತಿಅದೆ.ಯಾವ ಕುಟುಂಬ ಕಾರ್ಯಕ್ರಮ ಆಯೋಜಿಸುತ್ತದೆ ಎನ್ನುವುದು ನಿರ್ಧಾರ ಆದ ಬಳಿಕ ಉತ್ಸವಕ್ಕೆ ನಾಮಕರಣ ಮಾಡಲಾಗುತ್ತದೆ.ಯಾವುದೇ ಕುಟುಂಬಕ್ಕೆ ಇದೊಂದು ಹೆಮ್ಮೆಯ ವಿಚಾರವಾಗಿದ್ದು ದೊಡ್ಡ ಮಟ್ಟದಲ್ಲಿ ಹಾಕಿ ಉತ್ಸವ ಆಯೋಜಿಸುವುದು ಕೊಡವ ಸಮುದಾಯ, ಕುಟುಂಬದ ಗೌರವದ ಪ್ರಶ್ನೆಯಾಗಿ ಬೆಳೆದು ಬಂದಿದೆ.
1997 ರಲ್ಲಿ, ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದ ಪಾಂಡಂಡ ಕುಟ್ಟಪ್ಪ ಮತ್ತು ಅವರ ಸಹೋದರ ಕಾಶಿ ಪೊನ್ನಪ್ಪ ಮೊದಲ ಕೊಡವ ಹಾಕಿ ಉತ್ಸವವನ್ನು ಆಯೋಜಿಸುವ ಮೂಲಕ ಕೊಡವ ಸಮುದಾಯಕ್ಕೆ ಹಾಕಿಯನ್ನು ಪರಿಚಯಿಸಿದರು2018 ರಲ್ಲಿ ಕುಲ್ಲೇತಿರಾ ಕುಟುಂಬ ನಾರ್ಪೋಕ್ಲುವಿನಲ್ಲಿ ಹಾಕುಇ ಉತ್ಸವವನ್ನು ಆಯೋಜಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos