ರಾಜ್ಯ

ಗೌರಿ ಹತ್ಯೆ ಪ್ರಕರಣ: 14ನೇ ಆರೋಪಿ ವಶಕ್ಕೆ ಪಡೆದ ಎಸ್ಐಟಿ

Manjula VN
ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಮಹಾರಾಷ್ಟ್ರ ಪೊಲೀಸರ ಬಲೆಗೆ ಬಿದ್ದಿದ್ದ ಹಿಂದೂ ಪರ ಸಂಘಟನೆಯ ಮುಖಂಡ ಸುಧನ್ವ ಗೊಂದಲೇಕರ್'ನನ್ನು ಗೌರಿ ಹತ್ಯೆ ಹತ್ಯೆ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದುಕೊಕಂಡಿದ್ದಾರೆ. 
ಸುಧನ್ವ ಗೊಂದಲೇಕರ್ (39) ಸತಾರ ನಿವಾಸಿಯಾಗಿದ್ದು, ಗೌರಿ ಹತ್ಯೆ ಪ್ರಕರಣದ 14ನೇ ಆರೋಪಿಯಾಗಿದ್ದಾರೆ. 
ರಾಜ್ಯದಲ್ಲಿ ಉಗ್ರರ ದಾಳಿಗಳಿಗೆ ಸಹಾಯ ಮಾಡುತ್ತಿರುವ ಆರೋಪ ಸಂಬಂಧ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳನ್ನು ಈತನ್ನು ಆ.10 ರಂದು ಬಂಧನಕ್ಕೊಳಪಡಿಸಿದ್ದರು. 
ಹತ್ಯೆ ನಡೆದ 2017 ಸೆ.5ರಂದು ಮಧ್ಯಾಹ್ನ ಗೌರಿ ಅವರ ಮನೆ ಬಳಿ ಸುಧನ್ವ, ತನ್ನ ಸಹಚರ ಶರದ್ ಓಡಾಡಿದ್ದ. ಆ ದೃಶ್ಯವು ಅಲ್ಲಿನ ಸನ್'ರೈಸ್ ರೆಸಿಡೆನ್ಸಿ ಅಪಾರ್ಟ್'ಮೆಂಟ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದಲ್ಲದೆ, ಅಮೋಲ್ ಕಾಳೆ ಡೌರಿಯಲ್ಲಿ ಈತನ ಹೆಸರಿರುವುದು ಕಂಡು ಬಂದಿತ್ತು. ಈ ಹಿನ್ನಲೆಯಲ್ಲಿ ಆರೋಪಿಯನ್ನು ಎಸ್ಐಟಿ ಆಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 
ಇನ್ನು ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿಯ ಹೆಸರನ್ನು ಬಹಿರಂಗಪಡಿಸದೆ ಮಾಹಿತಿ ನೀಡಿರುವ ಅಧಿಕಾರಿಗಳು, ವಿಚಾರಣೆ ವೇಳೆ ಹಲವು ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಹತ್ಯೆ ಪ್ರಕರಣಗಳಲ್ಲಿ ಗೊಂದಲೇಕರ್ ಪ್ರಮುಖ ಆರೋಪಿಯಾಗಿದ್ದಾನೆ. ಸಿಸಿಟಿವಿಯಲ್ಲಿಯೂ ಹತ್ಯೆ ನಡೆದ ಸಂದರ್ಭದಲ್ಲಿ ಗೊಂದಲೇಕರ್ ಓಡಾಡಿರುವ ದೃಶ್ಯಗಳು ಕಂಡು ಬಂದಿದೆ. ಅಗತ್ಯ ಬಿದ್ದರೆ, ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 
ಇದಲ್ಲದೆ, ಹತ್ಯೆಯಾದ ಬಳಿಕ 10 ದಿನಗಳ ಕಾಲ ಗೊಂದಲೇಕರ್ ನಗದಲ್ಲಿಯೇ ವಾಸವಿಲ್ಲ. ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲನ್ನು ಪಡೆದುಕೊಂಡ ಗೊಂದಲೇಕರ್ ನಂತರ ಅದನ್ನು ಸುರಕ್ಷಿತ ಪ್ರದೇಶದಲ್ಲಿರಿಸಿದ್ದ. ಇನ್ನು ಕಾಳೆ ಡೈರಿಯಲ್ಲಿ ಮತ್ತೊಬ್ಬ ಆರೋಪಿ ಶ್ರೀಕಾಂತ್ ಪಂಗರ್ಕರ್ ಹೆಸರೂ ಕೂಡ ಇದ್ದು, ಈತನ ವಶಕ್ಕಾಗಿ ಎಸ್ಐಟಿ ಕಾಯುತ್ತಿದೆ. ಅಮೋಲ್ ಕಾಳೆ ಪಂಗರ್ಕರ್ ಜೊತೆಗೆ ಮೊಬೈಲ್ ನಲ್ಲಿ ಸಂದೇಶಗಳನ್ನು ಕಳುಹಿಸಿದ್ದು, ಈತನಿಗೂ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ಸಂಬಂಧವಿದೆ ಎಂದು ಶಂಕಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 
SCROLL FOR NEXT