ಕುಣಿಗಲ್(ತುಮಕೂರು): ರಕ್ಕಸ ನಾಯಿಗಳ ದಾಳಿಗೆ 10 ವರ್ಷದ ಬಾಲಕಿ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆ ಕುಣಿಗಲ್ ನಲ್ಲಿ ನಡೆದಿದೆ.
ಕುಣಿಗಲ್ ನ ಅರಸರ ಪಾಳ್ಯದಲ್ಲಿ 10 ವರ್ಷದ ಬಾಲಕಿ ತೇಜಸ್ವಿನಿ ಅಣಬೆ ಕೀಳಲೆಂದು ಹೋಗಿದ್ದ ಸಂದರ್ಭದಲ್ಲಿ ಬಾಲಕಿಯನ್ನು ಸುತ್ತುವರಿದ ನಾಯಿಗಳು ಆಕೆಯ ಎರಡೂ ಕೈಗಳನ್ನು ಕಚ್ಚಿ ತಂದಿವೆ.
ಬಾಲಕಿಯ ಚೀರಾಟವನ್ನು ಗಮನಿಸಿದ ಸಾರ್ವಜನಿಕರು ಬಾಲಕಿಯನ್ನು ರಕ್ಷಿಸಲು ಯತ್ನಿಸಿದ್ದು ಈ ವೇಳೆ ಬಾಲಕಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ.
ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ವಾರದ ಹಿಂದೆ ಬೆಂಗಳೂರಿನ ವಿಭೂತಿಪುರಂನಲ್ಲಿ ಬೀದಿ ನಾಯಿ ದಾಳಿಗೆ ಬಾಲಕನೋರ್ವ ಬಲಿಯಾಗಿದ್ದ.