ರಾಜ್ಯ

ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಭಾರತೀಯ ವಾಯುಪಡೆ ಪೈಲೆಟ್ಗಳಲ್ಲಿ ನಿದ್ರಾ ಕೊರತೆ: ಬಿಎಸ್. ಶಾನಿಯ

Manjula VN
ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಳಕೆ ಭಾರತೀಯ ವಾಯುಪಡೆ ಪೈಲೆಟ್'ಗಳಲ್ಲಿ ನಿದ್ರೆಯ ಅಭಾವತೆಯನ್ನುಂಟು ಮಾಡುತ್ತಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಬಿ.ಎಸ್.ಶಾನಿಯ ಅವರು ಹೇಳಿದ್ದಾರೆ. 
ಇಂಡಿಯನ್ ಸೊಸೈಟಿ ಆಫ್ ಏರೋಸ್ಪೇಸ್ ಮೆಡಿಸಿನ್ 57ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು. ಸಾಮಾಜಿಕ ಜಾಲತಾಣಗಳ ಬಳಕೆಯಿಂದ ನಿದ್ರೆಯ ಅಭಾವ ಉಂಟಾಗುತ್ತಿದ್ದು, ಇದರಿಂದ ಸಮಸ್ಯೆಗಳು ಎದುರಾಗುತ್ತಿವೆ. ಭಾರತೀಯ ವಾಯುಪಡೆಯ ಪೈಲೆಟ್ಗಳಲ್ಲಿ ಉಂಟಾಗುತ್ತಿರುವ ನಿದ್ರಾ ಸಮಸ್ಯೆಗೆ ಅಂತರಿಕ್ಷಯಾನ ವೈದ್ಯಕೀಯ ತಜ್ಞರು ಔಷಧಿಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಹೇಳಿದ್ದಾರೆ. 
ಇಂತಹ ಸಮಸ್ಯೆಗದಳು ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚಾಗುತ್ತದೆ. ಬೇಸಿಗೆಯಲ್ಲಿ ಉಷ್ಣಾಂಶ 40 ಡಿಗ್ರಿಗೆ ಹೋಗುತ್ತವೆ. ಇಂತಹ ಸಂದರ್ಭದಲ್ಲಿ ಪೈಲೆಟ್ ಗಳು ಬೆಳಗಿನ ಸಂದರ್ಭದಲ್ಲಿ ವಿಮಾನಗಳನ್ನು ಚಾಲನೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೈಲೆಟ್ ಗಳು ಬೆಳಿಗ್ಗೆ 6 ಗಂಟೆಯಿಂದಲೇ ಕೆಲಸಕ್ಕೆ ಹಾಜರಾಗಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳನ್ನು ಪೈಲೆಟ್ ಗಳು ಹೆಚ್ಚಾಗಿ ಬಳಕೆ ಮಾಡುವುದರಿಂದ ನಿದ್ರೆಯ ಕೊರತೆಯಿಂದ ಬಳಲುತ್ತಿರುತ್ತಾರೆ. ಪೈಲೆಟ್ ಗಳು ನಿದ್ರಾ ಸಮಸ್ಯೆಯಿಂದ ಬಳಲುವುದರಿಂದ ಅಪಘಾತಗಳು ಸಂಭವಿಸುತ್ತವೆ ತಿಳಿಸಿದ್ದಾರೆ. 
SCROLL FOR NEXT