ನಾವು ಕಾಂಗ್ರೆಸ್ ಬಿಡುವುದಿಲ್ಲ, ಕೆಲವು ಶಾಸಕರು ಬಿಟ್ಟು ಸರ್ಕಾರ ಪತನವಾದ್ರೆ ನಮಗೇನು ಗೊತ್ತು?: ಸತೀಶ್ ಜಾರಕಿಹೊಳಿ
ಕಾಂಗ್ರೆಸ್ ನಲ್ಲಿ ಜಾರಕಿಹೊಳಿ ಸಹೋದರ ಅಸಮಾಧಾನದಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗುವ ಆತಂಕ ಎದುರಾಗಿದೆ.
ಬೆಂಗಳೂರು: ಕಾಂಗ್ರೆಸ್ ನಲ್ಲಿ ಜಾರಕಿಹೊಳಿ ಸಹೋದರ ಅಸಮಾಧಾನದಿಂದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಗುವ ಆತಂಕ ಎದುರಾಗಿದೆ. ಈ ನಡುವೆ ಎಲ್ಲವೂ ಸರಿ ಇದೆ ಎಂದು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿದೆಯಾದರೂ ಸಹೋದರರ ಹೇಳಿಕೆಯಿಂದ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
ಕಾಂಗ್ರೆಸ್ ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆಂಬ ಊಹಾಪೋಹಗಳ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ನಾವಂತೂ ಕಾಂಗ್ರೆಸ್ ಪಕ್ಷ ಬಿಡುವ ಮಾತಿಲ್ಲ. ಬೇರೆ ಶಾಸಕರು ಪಕ್ಷ ತೊರೆದರೆ ನಮಗೇನು ಗೊತ್ತು? ಎಂದು ಹೇಳಿದ್ದಾರೆ. ಸತೀಶ್ ಜಾರಕಿಹೊಳಿ ಅವರ ಈ ಹೇಳಿಕೆಯನ್ನು ದೃಶ್ಯ ಮಾಧ್ಯಮಗಳು ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಸೂಚನೆ ಎಂದೇ ಬಿಂಬಿಸುತ್ತಿವೆ.
"ಶಾಸಕರು ಕಾಂಗ್ರೆಸ್ ಬಿಡುವ ಬಗ್ಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ನಾವು ಕಾಂಗ್ರೆಸ್ ಬಿಡುವುದಿಲ್ಲ. ಬಿಟ್ಟು ಹೋಗುವ ಶಾಸಕರದ್ದು ವೈಯಕ್ತಿಕ ನಿರ್ಧಾರ, ಅಂತಹ ಶಾಸಕರಿಂದ ಸರ್ಕಾರ ಪತನವಾದ್ರೆ ನಮಗೇನು ಗೊತ್ತು? ಎಂದು ಹೇಳಿದ್ದಾರೆ.