ಸಂಗ್ರಹ ಚಿತ್ರ 
ರಾಜ್ಯ

ಕಳ್ಳತನಕ್ಕಾಗಿ ದೆಹಲಿಯಿಂದ ನಗರಕ್ಕೆ ಬರುತ್ತಿದ್ದ ಹೈಟೆಕ್ ಕಳ್ಳ ಪೊಲೀಸರ ಬಲೆಗೆ

ರಾಷ್ಟ್ರ ರಾಜಧಾನಿ ದೆಹಲಿಯಿಂದ ವಿಮಾನದಲ್ಲಿ ಸಿಲಿಕಾನ್ ಸಿಟಿಗೆ ಆಗಮಿಸಿ ಮನೆ ಕಳ್ಳತನ ಮಾಡಿ ಮತ್ತೆ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಹೈಟೆಕ್ ಕಳ್ಳನೊಬ್ಬ ಜೀವನ್ ಭೀಮಾನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ...

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಿಂದ ವಿಮಾನದಲ್ಲಿ ಸಿಲಿಕಾನ್ ಸಿಟಿಗೆ ಆಗಮಿಸಿ ಮನೆ ಕಳ್ಳತನ ಮಾಡಿ ಮತ್ತೆ ವಿಮಾನದಲ್ಲಿ ಪರಾರಿಯಾಗುತ್ತಿದ್ದ ಹೈಟೆಕ್ ಕಳ್ಳನೊಬ್ಬ ಜೀವನ್ ಭೀಮಾನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. 
ದೆಹಲಿಯ ಚೋರ್ ಬಜಾರ್'ನ ಅರ್ಮಾನ್ ಖಾನ್ ಅಲಿಯಾಸ್ ಸೋನು (26) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯಿಂದ ಸುಮಾರು ರೂ.45 ಲಕ್ಷ ಮೌಲ್ಯದ ಒಂದೂವರೆ ಕೆಜಿ ಯಷ್ಟು ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ ವಶಕ್ಕೆ ಪಡೆದುಕೊಳ್ಳಲಾಗಿದೆ. 
ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 
ಮೂಲತಃ ದೆಹಲಿಯ ಅರ್ಮಾನ್ ಕಳವು ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡಿದ್ದ. 2014ರಿಂದ ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ದೆಹಲಿಯಿಂದ ವಿಮಾನದಲ್ಲಿ ತನ್ನ ತಂಡದೊಂದಿಗೆ ಆರೋಪಿ ನಗರಕ್ಕೆ ಬರುತ್ತಿದ್ದ. ಕಳ್ಳತನ ಮಾಡುವ ಪ್ರದೇಶಕ್ಕೆ ಸಮೀಪದಲ್ಲಿ ಐಷಾರಾಮಿ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ನಡೆದುಕೊಳ್ಳುತ್ತಿದ್ದರು. ಹೀಗಾಗಿಯೇ ಐಷಾರಾಮಿ ಮನೆಗಳನ್ನೇ ಬಾಡಿಗೆಗೆ ಪಡೆದುಕೊಳ್ಳುತ್ತಿದ್ದರು. ಕೆಲ ದಿನ ಇಲ್ಲಿಯೇ ನೆಲೆಸುತ್ತಿದ್ದ ಅರ್ಮಾನ್ ಹಗಲು ವೇಳೆ ಸುತ್ತಾಡುತ್ತಿದ್ದ. 
ಬೀಗ ಹಾಕಿರುವ ಮನೆಗಳ ಬಳಿ ತೆರಳಿ ಮನೆಯ ಕಾಲಿಂಗ್ ಬೆಲ್ ಒತ್ತುತ್ತಿದ್ದ. ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕ ಆರೋಪಿಗಳು ಮನೆಯ ಬೀಗ ಒಡೆದು ಕಳವು ಮಾಡುತ್ತಿದ್ದರು. ಹೀಗೆ ನಾಲ್ಕಾರು ಮನೆಗೆ ಕನ್ನ ಹಾಕಿದ ಬಳಿಕ ಏಕಾಏಕಿ ದೆಹಲಿಗೆ ವಿಮಾನವೇರಿ ಪರಾರಿಯಾಗುತ್ತಿದ್ದರು. 
ಪ್ರತೀ ಕೃತ್ಯದ ಬಳಿಕ ಸಿಮ್ ಬದಲಿಸುತ್ತಿದ್ದ ಆರೋಪಿಗಳು
ಆರೋಪಿ ಅರ್ಮಾನ್ ಪ್ರತೀ ಬಾರಿ ಬೆಂಗಳೂರಿಗೆ ಬಂದ ಬಳಿಕ ಬೇರೆ-ಬೇರೆ ಸಿಮ್ ಕಾರ್ಡ್ ಬಳಸುತ್ತಿದ್ದ. ಒಮ್ಮೆ ಕೃತ್ಯ ಎಸಗಿದ ಬಳಿಕ ಆ ಸಿಮ್ ಕಾರ್ಡ್ ಬಳಸುತ್ತಿರಲಿಲ್ಲ. ಅಲ್ಲದೆ, ನಕಲಿ ಗುರುತಿನ ಚೀಟಿ ಪಡೆದು ಸಿಮ್ಮ ಪಡೆಯುತ್ತಿದ್ದ. ಇದರಿಂದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೆ ಕಷ್ಟವಾಗಿತ್ತು. ಇತ್ತೀಚೆಗೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಮನೆಯೊಂದಕ್ಕೆ ಆರೋಪಿಗಳು ಕನ್ನ ಹಾಕಿದ್ದರು. ಕೃತ್ಯ ನಡೆದ ಮನೆಯಲ್ಲಿ ಪೊಲೀಸರು ಆರೋಪಿಗಳ ಬೆರಳಚ್ಚು ಸಂಗ್ರಹಿಸಿದ್ದರು. 
ಅಂತರಾಜ್ಯ ಕಳ್ಳರು ಎಂದು ತಿಳಿದ ಪೊಲೀಸರು ಬೆರಳಚ್ಚು ತಪಾಸಣೆ ನಡೆಸಿದಾಗ ಅಶೋಕನಗರ ಠಾಣೆ ಪೊಲೀಸರು 2014ರಲ್ಲಿ ಬಂಧಿಸಿದ್ದ ಒಬ್ಬ ಆರೋಪಿಯ ಬೆರಳಚ್ಚಿಗೆ ಹೋಲಿಕೆಯಾಗುತ್ತಿತ್ತು. ಕೃತ್ಯ ನಡೆದ ಸ್ಥಳದಲ್ಲಿ ಸಂಪರ್ಕಕ್ಕೆ ಬಂದಿದ್ದ ಮೊಬೈಲ್ ಕರೆಗಳ ವಿವರ ಪರಿಶೀಲಿಸಿದಾಗ ದೆಹಲಿ ಮೂಲದ ಮೂರು ಮೊಬೈಲ್ ಸಂಖ್ಯೆಗಳು ರಾಜರಾಜೇಶ್ವರಿ ನಗರದಲ್ಲಿ ಸಂಪರ್ಕ ಪಡೆದಿರುವುದು ಪತ್ತೆಯಾಗಿತ್ತು. ಈ ವಿವರಗಳ ಆಧಾರದ ಮೇಲೆ ತನಿಖಾ ತಂಡ ಚೆನ್ನೈಗೆ ತೆರಳಿತಾದರೂ ಅಷ್ಟೊತ್ತಿಗೆ ಆರೋಪಿ ದೆಹಲಿಯ ವಿಮಾನ ಹತ್ತಿದ್ದ. ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿ ನಗರಕ್ಕೆ ಕರೆ ತರಲಾಗಿದೆ. 
ಆರೋಪಿ ಅರ್ಮಾನ್ 2014ರಲ್ಲಿ ಅಶೋಕ ನಗರ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಸೇರಿದ್ದ. ಬಳಿಕ ಜೈಲಿನಿಂದ ಹೊರ ಬಂದ ಆರೋಪಿ ದೆಹಲಿಗೆ ಪರಾರಿಯಾಗಿದ್ದ. ತನ್ನ ಕೃತ್ಯವನ್ನು ಮುಂದುವರೆಸಿದ್ದ ವಿಮಾನದಿಂದ ಬಂದು ಮನೆ ಕಳವು ಮಾಡಿ ಪರಾರಿಯಾಗುತ್ತಿದ್ದ. 2014ರ ನಂತರ ಆರೋಪಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರಲಿಲ್ಲ. ಈತನ ಬಂಧನದಿಂದ ಜೀವನ್ ಭೀಮಾನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 10 ಮನೆ ಕಳವು ಸೇರಿದಂತೆ ನಗರದ ವಿವಿಧೆಡೆ ನಡೆದಿರುವ ಸುಮಾರು 20ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್