ರಾಜ್ಯ

ಬೇಬಿ ಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ: ಕೆಆರ್ ಎಸ್ ಜಲಾಶಯಕ್ಕೆ ಅಪಾಯ?

Shilpa D
ಮೈಸೂರು: ಬೇಬಿ ಬೆಟ್ಟದ ನೆರೆಹೊರೆಯ ಶ್ರೀರಂಗಪಟ್ಟಣ ಹಾಗೂ ಪಾಂಡವಪುರ ತಾಲೂಕುಗಳಲ್ಲಿ  ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಕೆ ಆರ್ ಎಸ್ ಜಲಾಶಯದ ಸುರಕ್ಷಿತವಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ.
ಕೆಎರ್ ಆಸ್ ಸಮೀಪವಿರುವ ಬೇಬಿ ಬೆಟ್ಟ ಸೇರಿದಂತೆ ಸುತ್ತಮುತ್ತಲ ಎಲ್ಲಾ ಪ್ರದೇಶಗಳಲ್ಲೂ ಮೂರು ತಿಂಗಳ ಕಾಲ ಕಂದಾಯ ಇಲಾಖೆ ಎಲ್ಲಾ ರೀತಿಯ ಗಣಿಗಾರಿಕೆ ಯನ್ನು ನಿರ್ಬಂಧಿಸಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬೇಬಿ ಬೆಟ್ಟ ಕಾವಲ್, ಅನುಗಂಗನಹಳ್ಳಿ, ಮತ್ತು ಕನ್ನಂಬಾಡಿ, ಚಿನಕುರುಳಿ ಗ್ರಾಮಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ದೃಢ ಪಟ್ಟಿದ್ದು, ಇದರಿಂದಾಗಿ ಮಾಲಿನ್ಯ ಪ್ರಮಾಣ ಹೆಚ್ಚಿರುವುದು ವಿಚಾರಣೆ ವೇಳೆ ಖಚಿತವಾಗಿದೆ ಎಂದು ಶ್ರೀರಂಗಪಟ್ಟಣ ಡಿವೈಎಸ್ ಪಿ ವಿಶ್ವನಾಥ್ ತಿಳಿಸಿದ್ದಾರೆ.
ಈ ಸಂಬಂಧ ಮಂಡ್ಯ ಎಸ್ ಪಿ ಗೆ ಆರು ಪುಟಗಳ ವರದಿ ಸಲ್ಲಿಸಿದ್ದು, ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದರೇ ರಸ್ತೆಗಳು ಹಾಳಾಗಿ ಕಾನೂನು ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ, ಜೊತೆಗೆ ಜಲಾಶಯದ ರಕ್ಷಣೆಯ ಹಿತದೃಷ್ಟಿಯಿಂದಲೂ ಕಲ್ಲುಗಣಿಗಾರಿಕೆ ನಿರ್ಬಂಧಿಸಿ ತಹಶೀಲ್ದಾರ್ ಅಕ್ಟೋಬರ್ 10 2017 ರಿಂದ  ಡಿಸೆಂಬರ್ 10 2017ರ ವರೆಗೆ  ಆದೇಶ ಹೊರಡಿಸಿದ್ದರು ಎಂದು ಆರ್ ಟಿ ಐ ಕಾರ್ಯಕರ್ತ ರವೀಂದ್ರ ಹೇಳಿದ್ದಾರೆ, ಜಲಾಶಯದ ಹಿತದೃಷ್ಟಿಯಿಂದ ಸರ್ಕಾರ ಶಾಶ್ವತವಾಗಿ ನಿರ್ಭಂದಿಸಬೇಕು ಎಂದೇ ಆಗ್ರಹಿಸಿದ್ದಾರೆ.
SCROLL FOR NEXT