ಅಬ್ದುಲ್ ವಾಹಿದ್ ತನ್ವೀರ್ 
ರಾಜ್ಯ

ಆಫ್ರಿಕಾ ಬೈಕ್ ರೇಸ್ ನಲ್ಲಿ ಮೊದಲಿಗ, ವಿದೇಶದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಿಸಿದ ಮೈಸೂರು ಯುವಕ

ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ಯಾನ್ ಆಫ್ರಿಕಾ ಬೈಕ್ ರೇಸ್ ನಲ್ಲಿ ಮೈಸುಋ ಮೂಲದ ಯುವಕನೋರ್ವ ಪ್ರಥಮ ಸ್ಥಾನ ಪಡೆಯುವ ಮೂಲಕ ಆಫ್ರಿಕಾದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಲು ಕಾರಣನಾಗಿದ್ದಾನೆ.

ಮೈಸೂರು: ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ಯಾನ್ ಆಫ್ರಿಕಾ ಬೈಕ್ ರೇಸ್ ನಲ್ಲಿ ಮೈಸುಋ ಮೂಲದ ಯುವಕನೋರ್ವ ಪ್ರಥಮ ಸ್ಥಾನ ಪಡೆಯುವ ಮೂಲಕ ಆಫ್ರಿಕಾದಲ್ಲಿ ಕನ್ನಡ ಕೀರ್ತಿ ಪತಾಕೆ ಹಾರಲು ಕಾರಣನಾಗಿದ್ದಾನೆ.

ಮೈಸೂರಿನ ಅಬ್ದುಲ್ ವಾಹಿದ್ ತನ್ವೀರ್ ಎನ್ನುವ ಯುವಕ ಆಫ್ರಿಕಾದಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಮೊದಲಿಗನಾಗಿ ಮಿಂಚಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಟಿವಿಎಸ್ ಮೋಟಾರ್ ಸಂಸ್ಥೆ ಬೈಕ್ ರೈಡ್ ಮಾಡುತ್ತಿರುವ ತನ್ವೀರ್ ಈ ಬಾರಿ ದ. ಆಫ್ರಿಕಾದ ಪ್ಯಾನ್ ಆಫ್ರಿಕಾ ರೇಸ್ ನಲ್ಲಿ ಭಾಗವಹಿಸಿದ್ದರು. ಈ ರೇಸ್ ನಲ್ಲಿ ಭಾಗವಹಿಸಿದ ಮೂವರು ಭಾರತೀಯರಲ್ಲಿ ತನ್ವೀರ್ ಒಬ್ಬರಾಗಿದ್ದು ರೇಸ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ ಮೊದಲ ಭಾರತೀಯನೆನ್ನುವ ಹೆಮ್ಮೆಗೆ ಸಹ ಇವರು ಪಾತ್ರರಾಗಿದ್ದಾರೆ.

ಸುಮಾರು ೫೦ ಸ್ಪರ್ಧಿಗಳಿದ್ದ ಈ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ತನ್ವೀರ್ ವಿದೇಸದಲ್ಲಿ ಭಾರತದ ಕೀರ್ತಿ ಬೆಳಗಲು ಕಾರಣವಾಗಿದ್ದಾರೆ. 

ರೇಸ್ ಗೆದ್ದ ಬಳಿಕ ಮೈಸೂರಿಗೆ ಆಗಮಿಸಿರುವ ತನ್ವೀರ್ ಗೆ ಅವರ ಕುಟುಂಬ, ಸ್ನೇಹಿತರಿಂದ ಅಭೂತಪೂರ್ವ ಸ್ವಾಗತ ದೊರಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಮದ್ದೂರಿನಲ್ಲಿ ಪ್ರತಿಭಟನೆ ವೇಳೆ ಪೊಲೀಸರಿಂದ ಲಾಠಿಚಾರ್ಜ್; 21 ಮಂದಿ ಬಂಧನ; ಪೊಲೀಸರಿಗೆ ಸಿಎಂ ಖಡಕ್ ಸೂಚನೆ

Mehul Choksi ಹಸ್ತಾಂತರಿಸಿದರೆ, ಮುಂಬೈ ಜೈಲಿನಲ್ಲಿ ವೈದ್ಯಕೀಯ ಆರೈಕೆ, ಹಾಸಿಗೆ, ವೈಯಕ್ತಿಕ ಸ್ಥಳಾವಕಾಶ ವ್ಯವಸ್ಥೆ: ಬೆಲ್ಜಿಯಂಗೆ ಭಾರತ ಭರವಸೆ!

Ramayana: ಸೀತಾ ಪಾತ್ರಕ್ಕೆ Miss Universe India 2025 'ಮಣಿಕಾ' ಆಯ್ಕೆ!

ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ನಾಲ್ವರು ಹೋಂಗಾರ್ಡ್​ ಸೇರಿ 8 ಮಂದಿ ಗಾಯ,ಸೆಕ್ಷನ್ 144 ಜಾರಿ

ಜಿಎಸ್‌ಟಿ ಕಡಿತ: ಕಾರು ಪ್ರಿಯರಿಗೆ ಬಂಪರ್, Hyundai India ಬೆಲೆಯಲ್ಲಿ ಭಾರಿ ಇಳಿಕೆ! ಎಷ್ಟು ಅಗ್ಗ ಗೊತ್ತಾ?

SCROLL FOR NEXT