15 ಜಿಲ್ಲೆಗಳಲ್ಲಿ ‘ನಲಿ-ಕಲಿ’ ಕಾರ್ಯಕ್ರಮ ರದ್ದು: ದ್ವಿಭಾಷಾ ಪಠ್ಯಕ್ರಮ ಜಾರಿಗೆ ಸರ್ಕಾರ ಮುಂದು..!

1ನೇ ತರಗತಿಯಿಂದ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಪಾಠಕ್ರಮ ಜಾರಿಯಾಗಲಿದೆ. ಹಿಂದಿನಂತೆ ಕೇವಲ ಕನ್ನಡ ಮಾಧ್ಯಮದಲ್ಲದೇ ಹೊಸ ಬೋಧನಾ ವಿಧಾನ ತರಲಾಗುತ್ತದೆ. ಈ ಹಿನ್ನೆಲೆಯಲ್ಲಿ 15 ಜಿಲ್ಲೆಗಳಲ್ಲಿ ನಲಿ-ಕಲಿ ಯೋಜನೆ ರದ್ದುಪಡಿಸಲಾಗಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಜಾರಿಯಲ್ಲಿದ್ದ ‘ನಲಿ-ಕಲಿ’ (Nali Kali) ಕಾರ್ಯಕ್ರಮವನ್ನು ರಾಜ್ಯದ 15 ಜಿಲ್ಲೆಗಳಲ್ಲಿ ಕೈಬಿಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಮಾನಿಸಿದೆ. ಈ ನಿರ್ಧಾರ ಶಿಕ್ಷಣ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಶಿಕ್ಷಕರು ಮತ್ತು ಶಿಕ್ಷಣ ತಜ್ಞರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮ ರದ್ದುಪಡಿಸಿರುವುದನ್ನು ದೃಢಪಡಿಸಿದ್ದಾರೆ.

1ನೇ ತರಗತಿಯಿಂದ ಕನ್ನಡ ಮತ್ತು ಇಂಗ್ಲಿಷ್ ದ್ವಿಭಾಷಾ ಪಾಠಕ್ರಮ ಜಾರಿಯಾಗಲಿದೆ. ಹಿಂದಿನಂತೆ ಕೇವಲ ಕನ್ನಡ ಮಾಧ್ಯಮದಲ್ಲದೇ ಹೊಸ ಬೋಧನಾ ವಿಧಾನ ತರಲಾಗುತ್ತದೆ. ಈ ಹಿನ್ನೆಲೆಯಲ್ಲಿ 15 ಜಿಲ್ಲೆಗಳಲ್ಲಿ ನಲಿ-ಕಲಿ ಯೋಜನೆ ರದ್ದುಪಡಿಸಲಾಗಿದೆ ಎಂದು ಹೇಳಿದ್ದಾರೆ.

ಶಾಲಾ ಶಿಕ್ಷಣ ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ಕೂಡ ನಿರ್ಧಾರವನ್ನು ದೃಢಪಡಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ 1ರಿಂದ 3ನೇ ತರಗತಿಗಳಿಗೆ ಮೋನೋಗ್ರೇಡಿಂಗ್ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಶಿಕ್ಷಕರ ಕೊರತೆಯಿರುವ ಶಾಲೆಗಳಲ್ಲಿ ಒಂದೇ ತರಗತಿಯಲ್ಲಿ ಹಲವು ತರಗತಿಗಳ ಮಕ್ಕಳಿಗೆ ಪಾಠ ಕಲಿಸಲು ನಲಿ-ಕಲಿ ಕಾರ್ಯಕ್ರಮ ಆರಂಭಿಸಲಾಗಿತ್ತು. ಈಗ ಹೆಚ್ಚಿನ ಶಿಕ್ಷಕರ ನೇಮಕಾತಿ ಮಾಡುವ ನಿರ್ಧಾರದಿಂದಾಗಿ ಯೋಜನೆ ಕೈಬಿಡಲಾಗಿದೆ ಎಂದು ಹೇಳಿದ್ದಾರೆ.

ಶಿಕ್ಷಕರಲ್ಲಿ ಗೊಂದಲ

ಈ ನಡುವೆ ಕಾರ್ಯಕ್ರಮ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ.

File photo
CSR funds: ಕಟ್ಟಡ ನಿರ್ಮಿಸುವ ಕಂಪನಿಗಳ ಹೆಸರನ್ನೇ ಸರ್ಕಾರಿ ಶಾಲೆಗೆ ಇಡಲು ಅವಕಾಶ; ರಾಜ್ಯ ಸರ್ಕಾರ

ರಾಯಚೂರು ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ಮಾತನಾಡಿ, “1ರಿಂದ 3ನೇ ತರಗತಿಗಳಲ್ಲಿ 35 ವಿದ್ಯಾರ್ಥಿಗಳಿದ್ದಾರೆ. ಇದೀಗ 1ನೇ ತರಗತಿಗೆ ಹೊಸ ದಾಖಲಾತಿ ಆರಂಭವಾಗುತ್ತಿದೆ. ನಲಿ-ಕಲಿ ಮುಂದುವರಿಯುತ್ತದೆಯೇ ಅಥವಾ ಹೊಸ ಪಠ್ಯಕ್ರಮ ಬರುತ್ತದೆಯೇ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.

ಶೇ.90ರಷ್ಟು ವಿದ್ಯಾರ್ಥಿಗಳಿಗೆ ಬರವಣಿಗೆಯ ಕೌಶಲ್ಯವಿಲ್ಲ

ಏತನ್ಮಧ್ಯೆ ನಲಿ-ಕಲಿ ಕುರಿತು ಶಿಕ್ಷಣ ಸಚಿವರಿಗೆ ವರದಿ ಸಲ್ಲಿಸಿರುವ ರವಿಕುಮಾರ್ ನೀಹಾ ಅವರು ಮಾತನಾಡಿ, ನಲಿ-ಕಲಿ ಚಟುವಟಿಕೆ ಆಧಾರಿತ ಕಲಿಕೆಗೆ ಉತ್ತಮ ಕಾರ್ಯಕ್ರಮ. ಆದರೆ, ಇದರಿಂದ ಮಕ್ಕಳಲ್ಲಿ ಬರವಣಿಗೆ ಮತ್ತು ಓದುವ ಮೂಲ ಕೌಶಲ್ಯ ಬೆಳೆಯುವುದಿಲ್ಲ. 4ನೇ ತರಗತಿಗೆ ಬಂದಾಗ ಬಹುತೇಕ ಮಕ್ಕಳಿಗೆ ಬರೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಕೇವಲ ಶೇ.10ರಷ್ಟು ವಿದ್ಯಾರ್ಥಿಗಳು ಮಾತ್ರ ಸಾಂಪ್ರದಾಯಿಕ ಕಲಿಕೆಯ ರೂಪಕ್ಕೆ ಹೊಂದಿಕೊಳ್ಳಬಹುದು. ಈ ಮಕ್ಕಳಲ್ಲಿ ಕೇವಲ ಶೇ.10ರಷ್ಟು ಮಾತ್ರ ಪ್ರೌಢಶಾಲೆಯಲ್ಲಿ ಉತ್ತಮ ಸಾಧನೆ ಮಾಡಬಹುದು. ಉಳಿದ ಶೇ.90ರಷ್ಟು ವಿದ್ಯಾರ್ಥಿಗಳು 4 ನೇ ತರಗತಿಗೆ ಸೇರಿದ ನಂತರ ತಮ್ಮ ಹೆಸರುಗಳನ್ನು ಹೊರತುಪಡಿಸಿ ಏನನ್ನೂ ಬರೆಯುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ.

ನಲಿ ಕಲಿಯನ್ನು ಹೆಚ್ಚು ಪ್ರಭಾವಶಾಲಿಯಾಗಿ ಮಾಡಲು, ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕೇಂದ್ರೀಕರಿಸಲು ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ನೀಡಲು ಪ್ರತಿ ತರಗತಿಯು 5 ವಿದ್ಯಾರ್ಥಿಗಳಿಗೆ ಸೀಮಿತವಾಗಿರಬೇಕು. ತರಗತಿಯಲ್ಲಿ ನಲಿ ಕಲಿಯನ್ನು ಕಾರ್ಯಗತಗೊಳಿಸಲು ಶಿಕ್ಷಕರಿಗೆ ಆವರ್ತಕ ತರಬೇತಿ, ಪರೀಕ್ಷೆಗಳು ಮತ್ತು ವಿವಿಧ ಚಟುವಟಿಕೆಗಳ ಮೂಲಕ ನಿರಂತರ ಮೌಲ್ಯಮಾಪನವನ್ನು ಶಿಫಾರಸು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com