ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ, ಪಂಗಡದ ಯುವಕರಿಗೆ ಉದ್ಯೋಗ್ಯ ಪಡೆಯಲು ಸೂಕ್ತ ತರಬೇತಿ ಒದಗಿಸುವ ನಿಟ್ಟಿನಲ್ಲಿ 225 ಕೋಟಿ ರೂ. ವೆಚ್ಚದ ಐರಾವತಿ ಯೋಜನೆಯನ್ನು ಪ್ರಾರಂಭಿಸಿದೆ.
ಸಮಾಜ ಕಲ್ಯಾಣ ಇಲಾಖೆ ಹಾಗೂ ಉಬರ್ ಕಂಪನಿ ನಡುವೆ ಪರಸ್ಪರ ಒಪ್ಪಂದ ಮಾಡಿಕೊಂಡಿದ್ದು,ಈ ಸಮುದಾಯದ 500 ಯುವಕರಿಗೆ ವೈಯಕ್ತಿಕವಾಗಿ ಉದ್ಯೋಗ ಒದಗಿಸಲಾಗುತ್ತಿದೆ.
ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಚಾಲನೆ ತರಬೇತಿ ನೀಡಲಾಗುತ್ತಿದ್ದು, ತರಬೇತಿ ನಂತರ ಕಾರನ್ನು ಕೊಳ್ಳಲು 5 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುತ್ತಿದೆ.
ಯೋಜನೆಯಡಿ ತಿಂಗಳಲ್ಲಿ 20 ದಿನಗಳವರೆಗೂ ಉಬರ್ ಕಂಪನಿಯಿಂದ ಸಂವಹನ, ಕೌಶಲಾಭಿವೃದ್ದಿ ಹಾಗೂ ಚಾಲನ ತರಬೇತಿ ನೀಡಲಾಗುತ್ತದೆ. ತರಬೇತಿ ನಂತರ ಚಾಲಕರನ್ನಾಗಿ ನೇಮಕ ಮಾಡಿಕೊಳ್ಳುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.