ಭಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಹತ್ಯೆಗೆ ಯತ್ನ!
ಮಂಗಳೂರು: 2015ರಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ಇಮ್ತಿಯಾಜ್ (30) ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ.
ಸೋಮವಾರ ಬೆಳಿಗ್ಗೆ ಆರಕ್ಕೆ ಮೂಡಬಿದಿರೆಯಲ್ಲಿನ ಹೋಟೆಲ್ ನಲ್ಲಿ ಇದ್ದ ಮೊಹಮ್ಮದ್ ಇಮ್ತಿಯಾಜ್ ಮೇಲೆ ಒಂಬತ್ತು ಸದಸ್ಯರಿದ್ದ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ಮಾಡಿದೆ. ಮೂಡಬಿದಿರೆಯ ಹೊರವಲಯದ ಗಂಟಾಲ್ ಕಟ್ಟೆ ಎನ್ನುವಲ್ಲಿ ಈ ಘಟನೆ ನಡೆದಿದ್ದು ದಾಳಿಕೋರರು ತಲ್ವಾರ್ ಬಳಸಿ ಆತನ ಕಾಲು ಹಾಗೂ ತಲೆಗೆ ಹಲ್ಲೆ ನಡೆಸಿದ್ದಾರೆ.
ದಾಳಿ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲ ಉಪ ಪೊಲೀಸ್ ಆಯುಕ್ತ ಉಮಾ ಪ್ರಶಾಂತ್ ಹೇಳಿದ್ದು ಮೂಡಬಿದಿರೆ ಪಟ್ಟಣ ಹಾಗೂ ಸುತ್ತಮುತ್ತ ಬಿಗಿ ಬಂದೋಬಸ್ಥ್ ಮಾಡಲಾಗಿದೆ.
ಮೂಡಬಿದಿರೆಯ ಇನ್ಸ್ ಪೆಕ್ಟರ್ ದೇಜಪ್ಪ ಹೇಳುವಂತೆ ಇಮ್ತಿಯಾಜ್ ಪ್ರಶಾಂತ್ ಪೂಜಾರಿ ಕೊಲೆಯ ಪ್ರಮುಖ ಆರೋಪಿಯಾಗಿದ್ದದ್ದಲ್ಲದೆ ಇತ್ತೀಚಿನ ದಿನಗಳಲ್ಲಿ ಹಲವು ಅಕ್ರಮ ಸಾರಿಗೆ ವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿದ್ದ. ಪ್ರಶಾಂತ್ ಹತ್ಯೆ ಪ್ರತೀಕಾರಕ್ಕಾಗಿ ಈ ಕೊಲೆ ಯತ್ನ ನಡೆದಿದೆ ಎಂದು ಶಂಕಿಸಲಾಗಿದೆ.
ಸದ್ಯ ಇಮ್ತಿಯಾಜ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ವಿವರಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos