ರಾಜ್ಯ

ರಂಗಕರ್ಮಿ ಹೆಗ್ಗೋಡು ಪ್ರಸನ್ನಗೆ 'ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ'

Raghavendra Adiga
ಬೆಂಗಳೂರು: ಖ್ಯಾತ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಅವರಿಗೆ '2018ನೇ ಸಾಲಿನ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿ' ನಿಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅಧ್ಯಕ್ಷತೆಯ ಸಮಿತಿ ಪ್ರಸನ್ನ ಅವರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಿದೆ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿಡಲಾಗುವ ಈ ಪ್ರಶಸ್ತಿ  5 ಲಕ್ಷ ರೂ ನಗದು, ಸ್ಮರಣಿಕೆ ಒಳಗೊಂಡಿರಲಿದೆ.ಇದೇ ಗಾಂಧಿ ಜಯಂತಿ (ಅಕ್ಟೋಬರ್ 2)ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನೆರವೇರಲಿದೆ.
ಇದಕ್ಕೆ ಮುನ್ನ ಎಸ್.ಎನ್. ಸುಬ್ಬರಾವ್, ಹೋ. ಶ್ರೀನಿವಾಸಯ್ಯ, ಚನ್ನಮ್ಮ ಹಳ್ಳಿಕೇರಿ ಹಾಗೂ ಹೆಚ್.ಎಸ್. ದೊರೆಸ್ವಾಮಿ ಅವರುಗಳು ಈ ಉನ್ನತ ಗೌರವಕ್ಕೆ ಭಾಜನರಾಗಿದ್ದರು.
ಪ್ರಸನ್ನ ಹಲವಾರು ವರ್ಷಗಳಿಂದ ರಂಗಕಲೆ, ನಾಟಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಲ್ಕತ್ತದ ನಂದಿಕಾರ್‌ ಪ್ರಶಸ್ತಿ, ಚದುರಂಗ ಪ್ರಶಾಸ್ತಿ,  ಬಿ.ವಿ.ಕಾರಂತ ಸಂಸ್ಮರಣೆ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರ, ಗೌರವಕ್ಕೆ ಪಾತ್ರರಾಗಿದ್ದಾರೆ.
SCROLL FOR NEXT