ಕೇವಲ 22 ಎಂಎಂ ಮಳೆಗೆ ಬೆಂಗಳೂರಿನಲ್ಲಿ ಸೃಷ್ಟಿಯಾಯ್ತು ಪ್ರವಾಹ ಪರಿಸ್ಥಿತಿ, ಅನಾಹುತಗಳ ಮಹಾಪೂರ
ಬೆಂಗಳೂರು: ಕಳೆದೆರಡು ರಾತ್ರಿ ನಗರದಲ್ಲಿ ಸುರಿದ ಮಳೆಗೆ ರಾಜಧಾನಿ ನಿವಾಸಿಗಳನ್ನು ಹೈರಾಣಾಗಿಸಿದೆ. ಧಾರಾಕಾರವಾಗಿ ಸುರಿದ ಮಳೆಗೆ ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಮಳೆ ಸೃಷ್ಟಿಸಿದ್ದ ಅವಾಂತರದಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಎರಡೂ ದಿನಗಳು ಒಟ್ಟು 22 ಎಂಎಂ ಮಳೆಯಾಗಿದ್ದು, ನಗರದ ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ಜೆಪಿ ನಗರ, ಚಂದ್ರಾ ಲೇ ಔಟ್, ಜಯನಗರ, ಬಿಟಿಎಂ ಲೇ ಔಟ್, ಗಿರಿನಗರ, ಹೆಬ್ಬಾಳದ ಸುತ್ತಮುತ್ತಲು ಪ್ರವಾಹದಂತಹ ಪರಿಸ್ಥಿತಿ ಎದುರಾಗಿತ್ತು.
ಹೆಬ್ಬಾಳ ಮೇಲ್ಸಾತುವೆ ಮೇಲೆ ನಿನ್ನೆ ಬೆಳಿಗ್ಗೆ ತೆರಳಿದ್ದ ದ್ವಿಚಕ್ರ ವಾಹನ ಸವಾರರು ಸಂಚಾರ ದಟ್ಟಣೆಯಿಂದಾಗಿ ಪರಿತಪಿಸುವಂತಾಗಿತ್ತು. ಮೇಲ್ಸೇತುವೆ ಮೇಲೆ ನೀರು ತುಂಬಿದ್ದ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿತ್ತು.
ಇನ್ನೂ 3-4 ದಿನಗಳ ಕಾಲ ಇದೇ ರೀತಿಯ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಿದ್ದರೆ. ಅನೇಕಲ್ ತಾಲೂಕಿನ ಕಲ್ಲುಬಾಳುವಿನಲ್ಲಿ 80.55 ಎಂಎಂ ಮಳೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಒಟ್ಟು 22 ಎಂಎಂ ಮಲೆಯಾಗಿದೆ.
ಮಳೆಯ ಅವಾಂತರ ಕುರಿತಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದು, ನಗರದಲ್ಲಿ ಎದುರಾದ ಭಾರೀ ಗಾಳಿಯಿಂದಾಗಿ ಒಟ್ಟು 300 ಮರಗಳು ಧರೆಗುರುಳಿವೆ ಎಂದು ಹೇಳಿದ್ದಾರೆ.
ಆದರೆ, ಬಿಬಿಎಂಪಿ ಮಾತ್ರ ಮಂಗಳವಾರ ಬೆಳಿಗ್ಗೆಯವರೆಗೂ ಕೇವಲ 4 ಮರಗಳು ಧರೆಗುರುಳಿವೆ ಎಂದು ಹೇಳಿದೆ. ಈ ಮೂರು ಮರಗಳು ಭಾರೀ ಗಾಳಿಯಿಂದಾಗಿ ನೆಲಕ್ಕುರುಳಿದೆ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics