ಹುಬ್ಬಳ್ಳಿ: ಹೊಸಪೇಟೆ ಮತ್ತು ಶಿವಮೊಗ್ಗದ ಕೆಲ ಮನೆಗಳಲ್ಲಿ ಇತ್ತೀಚೆಗೆ ಹೊಸ ಟ್ರೆಂಡ್ ಆರಂಭವಾಗಿದೆ. ಮದುವೆ ಹಾಗೂ ಗೃಹ ಪ್ರವೇಶ ಸಮಾರಂಭಗಳಲ್ಲಿ ವೆಲ್ ಕಮ್ ಡ್ರಿಂಕ್ ಆಗಿ ತಂಪು ಪಾನೀಯಗಳ ಬದಲು ನೀರಾ ಬಳಕೆ ಮಾಡುತ್ತಿದ್ದಾರೆ, ಇದರಲ್ಲಿ ಜೀರೋ ಪರ್ಸೆಂಟ್ ಆಲ್ಕೋಹಾಲ್ ಪ್ರಮಾಣ ಇರುವುದರಿಂದ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತಿದೆ.
ಇದಕ್ಕೆ ಜನರಿಂದ ಉತ್ತಮ ರೆಸ್ಪಾನ್ಸ್ ಬರುತ್ತಿದೆ, ಎರಡು ತಿಂಗಳ ಹಿಂದೆ,ಕುಣಿಗಲ್ ಮತ್ತು ತುಮಕೂರು ಗಳಿಂದ ನೀರಾ ಸಂಗ್ರಹಿಸಿ ಹೊಸಪೇಟೆಗೆ ಸುಮಾರು 1,500 ಗ್ಲಾಸ್ ನೀರಾವನ್ನು ಅತಿಥಿಗಳಿಗೆ ನೀಡಲಾಗಿತ್ತು, ಇದೇ ರೀತಿಯ ಟ್ರೆಂಡ್ ಈಗ ಶಿವಮೊಗ್ಗ, ಭದ್ರಾವತಿ, ಚಿತ್ರದುರ್ಗ ಹಾಗೂ ಹೊಸಪೇಟೆಗಳಲ್ಲಿ ಚಾಲ್ತಿಗೆ ಬರುತ್ತಿದೆ.
ತಮ್ಮ ಪುತ್ರನ ಮದುವೆಯಲ್ಲಿ ವೆಲ್ ಕಮ್ ಡ್ರಿಂಕ್ ಆಗಿ ನೀರಾ ಕೊಡಲಾಗಿತ್ತು, ನೀರಾ ಕೊಟ್ಟಿದ್ದಕ್ಕೆ ಕೆಲವು ಅತಿಥಿಗಳು ಈ ಬಗ್ಗೆ ನಮ್ಮನ್ನು ಕೇಳಿದರು, ಕೆಲವರು ಅಚ್ಚರಿ ವ್ಯಕ್ತ ಪಡಿಸಿದರು, ಆದರೆ ತೆಂಗಿನಕಾಯಿ ಪಾನೀಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇದರಿಂದ ಹಲವು ಲಾಭಗಳಿವೆ, ಇದರ ಬಗ್ಗೆ ನಮ್ಮ ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಎಂಜಿನೀಯರ್ ದಿವಾಕರ್ ಎಂಬುವರು ಹೇಳಿದ್ದಾರೆ.
2016 ರಲ್ಲಿ ನೀರಾ ನೀತಿ ಜಾರಿಗೆ ತಂದು ಬಳಕೆಗೆ ಅನುಮತಿ ನೀಡಲಾಯಿತು, ಸಭೆ ಸಮಾರಂಭಗಳಲ್ಲಿ ನೀರಾ ಬಳಕೆ ಟ್ರೆಂಡ್ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾರೆ, ನೀರಾದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿಟಮಿನ್ ಗಳಿವೆ, ತಂಪು ನೀರಾವನ್ನು ಸರ್ವ್ ಮಾಡುವುದು ಇತ್ತೀಚಿನ ಟ್ರೆಂಡ್ ಆಗಿದೆ, ಯಾರಾದರೂ ನನ್ನನ್ನು ಮದುವೆ, ಸಮಾರಂಭಗಳಿಗೆ ಆಹ್ವಾನಿಸಿದರೇ, ಅತಿಥಿಗಳಿಗೆ ವೆಲ್ ಕಮ್ ಡ್ರಿಂಕ್ ಆಗಿ ನೀರಾ ಕೊಡಲು ಸಲಹೆ ನೀಡುತ್ತೇನೆ ಎಂದು ದಿವಾಕರ್ ಹೇಳಿದ್ದಾರೆ
ನೀರಾವನ್ನು 4 ಡಿಗ್ರಿ ತಾಪಮಾನಕ್ಕಿಂತ ಹೆಚ್ಚಿರಬಾರದು, ಎಂಎನ್ಎಸ್ ಪಿಎಲ್ ನಲ್ಲಿ 200 ಎಂ ಎಲ್ ನೀರಾಗೆ 30 ರು ಗೆ ಮಾರಾಟ ಮಾಡಲಾಗುತ್ತದೆ. ನೀರವನ್ನು ಕಲ್ಪ ರಸ ಎಂದು ಸಹ ಕರೆಯಲಾಗುತ್ತದೆ.