ಬೆಂಗಳೂರು: ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಆರ್ ಬಿ ಬುದಿಹಾಲ್ ನಿವೃತ್ತರಾಗಿದ್ದಾರೆ. ಅವರಿಗೆ ನಿನ್ನೆ ಬಾರ್ ಅಂಡ್ ಬೆಂಚ್ ಆಫ್ ಕೋರ್ಟ್ ನಿಂದ ಪ್ರೀತಿಯ ವಿದಾಯ ಕೋರಲಾಯಿತು, ಅವರ ನಿವೃತ್ತಿಯಿಂದ ಹೈಕೋರ್ಟ್ ನ ನ್ಯಾಯಾಧೀಶರ ಸಂಖ್ಯೆ 29ಕ್ಕೆ ಇಳಿದಿದೆ.
ನ್ಯಾಯಮೂರ್ತಿ ಬುದಿಹಾಲ್ ತಮ್ಮ ವಿದಾಯ ಭಾಷಣದಲ್ಲಿ, ಕಠಿಣ ಶ್ರಮಕ್ಕೆ ಪರ್ಯಾಯವಾದದ್ದು ಯಾವುದೂ ಇಲ್ಲ ಎಂದು ಯುವ ವಕೀಲರಿಗೆ ಕಿವಿಮಾತು ಹೇಳಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರ್ ಮಾತನಾಡಿ, ಹೈಕೋರ್ಟ್ ನಲ್ಲಿ ಬಾಕಿ ಉಳಿದ ಕ್ರಿಮಿನಲ್ ಅಪರಾಧ ಪ್ರಕರಣಗಳನ್ನು ತ್ವರಿತ ವಿಲೇವಾರಿಗೆ ಬುದಿಹಾಲ್ ಸಹಾಯ ಮಾಡಿದ್ದಾರೆ ಎಂದರು.
ಅಕ್ಟೋಬರ್ 1, 1956ರಲ್ಲಿ ಜನಿಸಿದ ಬುದಿಹಾಲ್ 2013ರಲ್ಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಬಡ್ತಿ ಹೊಂದಿದ್ದರು.