ಮಡಿಕೇರಿ: ವಿದ್ಯುತ್ ತಂತಿ ತಗುಲಿ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗೋಣಿಗೊಪ್ಪ ಸಮೀಪದ ಅರ್ವಕಥೊಕುಲು ಗ್ರಾಮದಲ್ಲಿ ನಡೆದಿದೆ.ತೋಟದಲ್ಲಿನ ಮರಗಳಿಂದ ತೆಂಗಿನ ಕಾಯಿಗಳನ್ನು ಕೀಳುವಾಗ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಧರ್ಮಜ್ಜ (50) ರವಿ (40) ಹಾಗೂ ಸತೀಶ್ (50) ಎಂದು ಗುರುತಿಸಲಾಗಿದೆ. ಕಬ್ಬಿಣದ ಏಣಿ ಸಹಾಯದಿಂದ ತೆಂಗಿನ ಕಾಯಿಗಳನ್ನು ಕೀಳುವಾಗ ಅಲ್ಲಿಯೇ ಹಾದು ಹೋದ ವಿದ್ಯುತ್ ತಂತಿ ಸಂಪರ್ಕಕ್ಕೆ ಬಂದು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ
ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ