ರಾಜ್ಯ

ಬೆಂಗಳೂರು: ಲೋಕಸಭಾ ಸದಸ್ಯರ ನಿಧಿ ಬಳಕೆಯಲ್ಲಿ ಡಿವಿಎಸ್ ಮುಂದು

Raghavendra Adiga
ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿ.ವಿ.ಸದಾನಂದಗೌಡ ಅವರು ಕಳೆದ ಐದು ವರ್ಷಗಳಲ್ಲಿ ತಮ್ಮ ಸಂಸದರ ನಿಧಿಯನ್ನು ಸಂಪೂರ್ಣ ಬಳಕೆ ಮಾಡಿಕೊಂಡಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅವರು ಶೇ.95ರಷ್ಟು ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ದಿ.ಅನಂತಕುಮಾರ್ ಅವರು ಶೇ.82 ರಷ್ಟು ನಿಧಿಯನ್ನು ಬಳಕೆ ಮಾಡಿದ್ದು, ಮೂರು ಕ್ಷೇತ್ರಗಳಲ್ಲಿ ನಾಗರಿಕ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ ಎಂದು ಬಿ.ಪ್ಯಾಕ್ ಸಂಸ್ಥೆ ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವರದಿ ಬಿಡುಗಡೆ ಮಾಡಿದ ಸಿಇಒ ರೇವತಿ ಮಾತನಾಡಿ, ವರದಿಯಲ್ಲಿ  2014-15ರಿಂದ 2018-19ರವರೆಗಿನ ಸಂಸದರು ಸ್ಥಳೀಯ ಅಭಿವೃದ್ಧಿ ಯೋಜನೆಗಳಿಗೆ ವ್ಯಯಿಸಿದ ಮೊತ್ತದ ವಿವರಗಳಿವೆ. ನಗರ ಜಿಲ್ಲಾಧಿಕಾರಿಗಳ ಮೂಲಕ ಈ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಮೂರು ಲೋಕಸಭಾ ಕ್ಷೇತ್ರದ ಸಂಸದ ಸದಸ್ಯರು ಕೈಗೊಂಡಿದ್ದ ಕಾರ್ಯಕ್ರಮ ಆಧಾರಿತ ವೆಚ್ಚದ ವಿವರ ಹಾಗೂ ಶೇಕಡಾವಾರು ಬಳಕೆಯನ್ನು ಲೆಕ್ಕ ಹಾಕಲಾಗಿದೆ ಎಂದು ಅವರು ತಿಳಿಸಿದರು.
ಒಟ್ಟು 60 ಕೋಟಿ ರೂ ನಿಧಿಯಲ್ಲಿ, 55 ಕೋಟಿ ರೂ. ಬಳಸಿಕೊಳ್ಳಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 61 ಹಾಗೂ ಬಿಬಿಎಂಪಿ ಹೊರತು ಪಡಿಸಿ ಶೇ 39ರಷ್ಟು ನಿಧಿ ಬಳಕೆ ಮಾಡಲಾಗಿದೆ. ಕುಡಿಯುವ ನೀರು ಹಾಗೂ ಮೂಲ ಸೌಕರ್ಯಕ್ಕೆ ಶೇ 25.98, ಮೂಲಸೌಕರ್ಯ ಅಭಿವೃದ್ಧಿಗೆ ಶೇ 12.62 ಹಾಗೂ ಸಾರ್ವಜನಿಕ ಸೌಲಭ್ಯಕ್ಕೆ ಶೇ 10.78 ಉಪಯೋಗಿಸಲಾಗಿದೆ ಎಂದರು.
SCROLL FOR NEXT