ರಾಜ್ಯ

ಚುನಾವಣೆ ಹಿನ್ನೆಲೆ: ಮತಗಟ್ತೆಗಳ ಸಮೀಪ ಧೂಮಪಾನ ಮಾಡಿದರೆ 200 ರು. ದಂಡ

Raghavendra Adiga
ಬೆಂಗಳೂರು: ಕರ್ನಾಟಕ ರಾಜ್ಯ ತಂಬಾಕು ವಿರೋಧಿ ದಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಂಬಾಕು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಬೆಂಗಳೂರು ನಗರ ಸೇರಿದಂತೆ ಎಲ್ಲಾ 30 ಜಿಲ್ಲೆಗಳಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೆ ತರುತ್ತಿದೆ. ಅದೇ ರೀತಿ ಮತದಾನದ ದಿನ ಪ್ರತಿ ಮತಗಟ್ಟೆಯ 100 ಗಜದಷ್ಟು ದೂರದ ವ್ಯಾಪ್ತಿಯಲ್ಲಿ ತಂಬಾಕಿನ ಮಾರಾಟವನ್ನು ನಿಷೇಧಿಸಲು ಅವರು ಚುನಾವಣಾ ಆಯೋಗವನ್ನು ಕೋರಿದ್ದಾರೆ. ಇಂತಹಾ ನಿಷೇಧಿತ ಪ್ರದೇಶದಲ್ಲಿ ತಂಬಾಕು ಸೇವಿಸುವವರು ಹಾಗೂ ಮಾರಾಟ  ಮಾಡುವ  ಅಂಗಡಿ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.
ಮುಂಬರುವ ಚುನಾವಣೆಗಳಲ್ಲಿ ಎಲ್ಲಾ ಮತಗಟ್ಟೆಗಳನ್ನು ತಂಬಾಕು ಮುಕ್ತಗೊಳಿಸಬೇಕು ಎನ್ನುವುದು ಈ ನಿಯಮಾಳಿಯ ಉದ್ದೇಶವಾಗಿದೆ. "ಜನರು ಧೂಮಪಾನದದುಷ್ಪರಿಣಾಮವನ್ನು ಅರ್ಥಮಾಡಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಮತದಾನ ಬೂತ್ ಗಳನ್ನು ಸಾರ್ವಜನಿಕರಿಗಾಗಿ ಸ್ಥಾಪಿಸಲಾಗುತ್ತದೆ. ಇದು ಸಾರ್ವಜನಿಕ ಸ್ಥಳವಾಗಿರುವ ಕಾರಣ ಧೂಮಪಾನ ನಿಷೇಧಿತ ಪ್ರದೇಶವಾಗಲಿದೆ.ಒಂದೊಮ್ಮೆ ಈ ಪ್ರದೇಶದಲ್ಲಿ ಧೂಮಪಾನ ಮಾಡಿದ್ದಾದರೆ  ಅಪರಾಧಿಗಳಿಗೆ 200 ರೂ. ದಂಡ ವಿಧಿಸಲಾಗುವುದು. ಅಲ್ಲದೆ ಅಂಗಡಿ ಮಾಲೀಕರು ತಮ್ಮ ಅಂಗಡಿಯ ಮುಂದೆ ತಂಬಾಕು ಸೇವನೆ, ಮಾರಾಟಕ್ಕೆ ಅವಕಾಶ ನಿಡಿದರೆ ಅವರಿಗೆ ಸಹ ರು.  200 ಕ್ಕೆ ಅಧಿಕ ದಂಡ ವಿಧಿಸಲಾಗುತ್ತದೆ.ತಂಬಾಕು ವಿರೋಧಿ ದಲದ ರಾಜ್ಯ ನೋಡಲ್ ಅಧಿಕಾರಿ ಡಾ. ಸೆಲ್ವರಾಜ್ ವಿವರಿಸಿದರು. ಉಪಕ್ರಮದ ಕಟ್ಟುನಿಟ್ಟಿನ ಜಾರಿ ಖಾತ್ರಿಪಡಿಸಿಕೊಳ್ಲಲು ತಂಡವು ಮತದಾನ ಕೇಂದ್ರಗಳಲ್ಲಿ ಹಠಾತ್ ತಪಾಸಣೆಯನ್ನೂ ನಡೆಸಲಿದೆ.
ಜನರಿಗೆ ಸಿಗರೇಟುಗಳನ್ನು ನೀಡುವ ಮೂಲಕ ಮತದಾರರಿಗೆ ಲಂಚ ನೀಡುವಂತಹ ಯಾವುದೇ ಪರಿಸ್ಥಿತಿಯನ್ನು ನಿಗ್ರಹಿಸಲು ಅವರು ಬಯಸುತ್ತಾರೆ ಎಂದು ಡಾ. ಸೆಲ್ವರಾಜ್ ಹೇಳಿದರು. ಚುನಾವಣೆಯಲ್ಲಿ ಯಾವ ಆಸೆ ಅಮಿಷಗಳಿಗೆ ಅವಕಾಶವಿಲ್ಲ, ಇದು ಕಟ್ಟುನಿಟ್ತಾಗಿ ನ್ಯಾಯಬದ್ದವಾಗಿ ನಡೆಯಲಿದೆ ಎಂದು ಚುನಾವಣಾ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ದೃಢಪಡಿಸಿದರು ಮತ್ತು ಚುನಾವಣೆಯಲ್ಲಿ ಎಲ್ಲಾ ಮತಗಟ್ಟೆಗಳೂತಂಬಾಕು ಮುಕ್ತವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
ತಮ್ಮ ಪ್ರಯತ್ನದ ಭಾಗವಾಗಿ, ತಂಬಾಕು-ವಿರೋಧಿ ದಳವು  ಜನವರಿಯಲ್ಲಿ ಸ್ಟಾಪ್ ಟೊಬಾಕೋ ಎಂಬ ಅಪ್ಲಿಕೇಷನ್ ಒಂದನ್ನು ಪ್ರಾರಂಭಿಸಿದೆ.ಇದರ ಮೂಲಕ ತಂಬಾಕು ನಿಷೇಧಿತ ಕಾನೂನು ಉಲ್ಲಂಘಿಸಿದವರ ಕುರಿತು ಸಾರ್ವಜನಿಕರು ಅಧಿಕಾರಿಗಳಿಗೆ ದೂರು ಸಲ್ಲಿಸಬಹುದು. ಎಂದು ಸೆಲ್ವರಾಜ್ ಹೇಳಿದ್ದಾರೆ.
SCROLL FOR NEXT