ರಾಜ್ಯ

ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಎರಡು ಆನೆಗಳ ಮೃತದೇಹ ಪತ್ತೆ

Srinivas Rao BV
ಚಾಮರಾಜನಗರ: ಇಲ್ಲಿನ ಕಾವೇರಿ ವನ್ಯಜೀವಿ ಅಭಯಾರಣ್ಯ ಮತ್ತು ಬಂಡೀಪುರ ಹುಲಿ ಮೀಸಲು ಅರಣ್ಯದಲ್ಲಿ ಎರಡು ಆನೆಗಳ ಮೃತದೇಹಗಳು ಪತ್ತೆಯಾಗಿವೆ.
ಕಾವೇರಿ ಅಭಯಾರಣ್ಯದ ಹನೂರು ಅರಣ್ಯ ವಲಯದಲ್ಲಿ 55 ವರ್ಷ ಪ್ರಾಯದ ಆನೆಯ ಮೃತದೇಹ ಮೊದಲು ಪತ್ತೆಯಾಯಿತು. ಗಸ್ತಿನಲ್ಲಿದ್ದ ಸಿಬ್ಬಂದಿ ಅದನ್ನು ನೋಡಿದ್ದಾರೆ. ಸ್ಥಳಕ್ಕೆ ಎಸಿಎಫ್ ಅಂಕರಾಜ್ ಮತ್ತು ಇತರರು ಭೇಟಿ ನೀಡಿ ಪರಿಶೀಲಿಸಿದರು. ಡಾ.ಸಿದ್ದರಾಜು ನೇತೃತ್ವದ ತಂಡ ಮೃತದೇಹದ  ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದು ಸ್ವಾಭಾವಿಕ ಸಾವು ಎಂದು ತಿಳಿಸಿದೆ.
40 ವರ್ಷ ಪ್ರಾಯದ ಮತ್ತೊಂದು ಆನೆಯ ಮೃತದೇಹ ಬಂಡೀಪುರ ನ್ಯಾಷನಲ್ ಪಾರ್ಕ್‌ನ ಮೂಲೆಹೊಳೆಯಲ್ಲಿ ಪತ್ತೆಯಾಗಿದೆ. ಮತ್ತೊಂದು ಆನೆಯೊಂದಿಗೆ ಜಗಳವಾಡಿದ ಪರಿಣಾಮ ಈ ಆನೆ ಸತ್ತಿರಬಹುದು ಎಂದು ಇದರ ಮರಣೋತ್ತರ ಪರೀಕ್ಷೆ ನಡೆಸಿದ ಡಾ.ನಾಗರಾಜ್‌ ತಿಳಿಸಿದ್ದಾರೆ. ಆನೆಯ ಹೊಟ್ಟೆ ಮತ್ತು ಇತರ ಭಾಗಗಳಲ್ಲಿ ಗಾಯದ ಗುರುತುಗಳಿದ್ದವು ಎಂದು ಅವರು ಮಾಹಿತಿ ನೀಡಿದ್ದಾರೆ.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಎರಡು ಆನೆಗಳನ್ನು ಅರಣ್ಯದೊಳಗೆ ಸುಡಲಾಯಿತು ಎಂದು ಅವರು ತಿಳಿಸಿದ್ದಾರೆ.
SCROLL FOR NEXT